ಹೂಂಕರಿಸಿದ ಕಿರಾತಕನ ಕ್ಷಿಪಣಿ, ಗುಡುಗಿದ ಟ್ರಂಪ್, ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

America-V-North-Korea-Missi

ಸಿಯೋಲ್/ವಾಷಿಂಗ್ಟನ್, ಸೆ.16-ವಿಶ್ವಸಂಸ್ಥೆಯ ಗಂಭೀರ ಎಚ್ಚರಿಕೆ ನಡುವೆಯೂ ಮತ್ತೆ ಖಂಡಾಂತರ ಕ್ಷಿಪಣಿ ಉಡಾಯಿಸಿ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಉತ್ತರಕೊರಿಯಾದ ಶಕ್ತಿಸಾಮರ್ಥ್ಯಗಳ ಬಗ್ಗೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೊಚ್ಚಿಕೊಂಡಿದ್ದಾರೆ. ಇದೇ ವೇಳೆ ಆ ದೇಶದ ವಿರುದ್ಧ ನಾವು ಕೈಗೊಳ್ಳುವ ಆಯ್ಕೆಗಳು ಅತ್ಯಂತ ಪರಿಣಾಮಕಾರಿಯಾಗುತ್ತದೆ ಎಂದು ಟ್ರಂಪ್ ಗುಡುಗಿದ್ದಾರೆ. ಇದರೊಂದಿಗೆ ಈ ಎರಡೂ ದೇಶಗಳ ಬಲಾಬಲಕ್ಕೆ ಅಖಾಡ ಸಜÁ್ಜಗುವ ಸಾಧ್ಯತೆಯೂ ಇದೆ.   ಉದ್ದೇಶಿತ ಅಣ್ವಸ್ತ್ರಗಳು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ನಾವು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದ್ದೇವೆ. ಅಮೆರಿಕವನ್ನು ಮೀರಿಸುವ ಪ್ರಚಂಡ ಬಲದ ಗುರಿ ಸಾಧನೆಯ ದಿಕ್ಕಿನತ್ತ ನಾವು ದಾಪುಗಾಲು ಹಾಕುತ್ತಿದ್ದೇವೆ ಎಂದು ಕಿಮ್ ಗುಡುಗಿದ್ದಾರೆ. ಸರ್ವಾಧಿಕಾರಿ ಹೇಳಿಕೆಯನ್ನು ಉತ್ತರ ಕೊರಿಯಾದ ಅಧಿಕೃತ ವಾರ್ತಾ ಸಂಸ್ಥೆ ಬಿಡುಗಡೆ ಮಾಡಿದೆ.

ಉತ್ತರ ಕೊರಿಯಾ ನಿನ್ನೆ ಉಡಾಯಿಸಿದ ಖಂಡಾಂತರ ಕ್ಷಿಪಣಿಯು ಉತ್ತರ ಪೆಸಿಫಿಕ್ ಸಾಗರದ ಮೇಲೆ ಇಳಿಯುವುದಕ್ಕೂ ಮುನ್ನ ಜಪಾನ್ ಮೇಲೆ ಹಾದು ಹೋಗಿ ಭಾರೀ ಆತಂಕ ಸೃಷ್ಟಿಸಿತ್ತು. ಕಿಮ್‍ನ ಅಣ್ವಸ್ತ್ರ ಪ್ರಯೋಗ ಉನ್ಮಾದದ ಪ್ರಚೋದನಾಕಾರಿ ಕ್ರಮವನ್ನು ವಿಶ್ವದ ಅನೇಕ ದೇಶಗಳು ಖಂಡಿಸಿದ್ದವು.
ಪರಿಣಾಮಕಾರಿ ಕ್ರಮ: ಟ್ರಂಪ್  ಈ ನಿಟ್ಟಿನಲ್ಲಿ ಉತ್ತರಕೊರಿಯಾ ವಿರುದ್ಧ ಅಮೆರಿಕ ಕೈಗೊಳ್ಳುವ ಆಯ್ಕೆಯು ಅತ್ಯಂತ ಪರಿಣಾಮಕಾರಿ ಮತ್ತು ದೊಡ್ಡ ಮಟ್ಟದ ಪ್ರತಿಕ್ರಿಯೆಯಾಗಿರುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸೇನಾ ಕಾರ್ಯಾಚರಣೆ ಆಯ್ಕೆ ಸಾಧ್ಯತೆ ಬಗ್ಗೆಯೂ ಈ ಹಿಂದೆ ತಿಳಿಸಿದ್ದ ಟ್ರಂಪ್ ಅಮೆರಿಕ ವಾಯುಪಡೆಯ 70ನೇ ವಾರ್ಷಿಕೋತ್ಸವ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ನಮ್ಮ ದೇಶ, ನಮ್ಮ ಜನರ ರಕ್ಷಣೆಗಾಗಿ ಯಾವುದೇ ಕ್ರಮಕ್ಕೆ ನಾವು ಸಿದ್ದ ಎಂದು ಹೇಳಿದರು. ಎಚ್ಚರಿಕೆ ಮತ್ತು ನಿಯಮಗಳನ್ನು ಗಾಳಿಗೆ ತೂರಿ ಉತ್ತರ ಕೊರಿಯಾ ಮತ್ತೆ ನಡೆಸಿರುವ ಕ್ಷಿಪಣಿ ಪ್ರಯೋಗಗಳಿಗೆ ಕಡಿವಾಣ ಹಾಕಲು ಸೇನಾ ಕಾರ್ಯಾಚರಣೆ ಒಂದು ಆಯ್ಕೆಯಾದರೂ, ನಾವು ಶಾಂತಿಯುತವಾಗಿ ಈ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ಇದೇ ವೇಳೆ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಲೆಫ್ಟಿನೆಂಟ್ ಜನರಲ್ ಎಚ್.ಆರ್. ಮ್ಯಾಕ್‍ಮಾಸ್ಟರ್ ತಿಳಿಸಿದ್ದಾರೆ. ಇದಕ್ಕಾಗಿ ಎಲ್ಲ ದೇಶಗಳೂ ಸಹಕಾರ ನೀಡುವಂತೆಯೂ ಅವರು ಕೋರಿದ್ದಾರೆ.

Facebook Comments

Sri Raghav

Admin