ಆಭರಣ ಖರೀದಿಸುವ ನೆಪದಲ್ಲಿ ಬಂದು ಚಿನ್ನಾಭರಣ ದೋಚಿದ್ದವನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Chikkamagaluru

ಚಿಕ್ಕಮಗಳೂರು,ಸೆ.17-ಆಭರಣ ಖರೀದಿಸುವ ನೆಪದಲ್ಲಿ ಇಲ್ಲಿನ ಚಿನ್ನಾಭರಣ ಅಂಗಡಿಗೆ ಬಂದ ಗುಂಪೊಂದು ಅಂಗಡಿ ಮಾಲೀಕನನ್ನು ಯಾಮಾರಿಸಿ ಒಡವೆಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ.  ನಗರದ ಎಂ.ಜಿ.ರಸ್ತೆಯಲ್ಲಿರುವ ಕೊಹಿನೂರ್ ಜ್ಯುವೆಲರಿ ಅಂಗಡಿಗೆ ನಾಲ್ವರು ಪುರುಷರು, ಇಬ್ಬರು ಮಹಿಳೆಯರು ಮಗುವಿನೊಂದಿಗೆ ಬಂದು ಚಿನ್ನ ಖರೀದಿಸುವ ನೆಪದಲ್ಲಿ ಕೆಲವರು ಮಾಲೀಕನನ್ನು ಸುತ್ತುವರಿದು ನಿಂತುಕೊಂಡಿದ್ದಾರೆ. ಆಗ ಉಳಿದ ಕೆಲವರು ಉಂಗುರಗಳು ಇದ್ದ ಟ್ರೇ ಒಂದನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ.

ಈ ಬಗ್ಗೆ ಅಂಗಡಿ ಮಾಲೀಕರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಗ ಕಾರ್ಯ ಪ್ರವೃತ್ತರಾದ ಪೊಲೀಸರು ಮಹಾರಾಷ್ಟ್ರ ಮೂಲದ ಚಂದ್ರಕಾಂತ್ ತುಕಾರಾಂ ಜಾದವ್(52) ಎಂಬುವನನ್ನು ಪತ್ತೆಹಚ್ಚಿ ಬಂಧಿಸಿ ತನಿಖೆಗೆ ಒಳಪಡಿಸಿದಾಗ ಆರೋಪಿ ಸತ್ಯ ಒಪ್ಪಿಕೊಂಡಿದ್ದಾನೆ.  ಮಹಾರಾಷ್ಟ್ರದಿಂದ ಕೂಲಿ ಕೆಲಸಕ್ಕೆಂದು ಬಂದಿದ್ದ ಇಲ್ಲಿಗೆ ಬಂದಿದ್ದ ಯಲ್ಲಪ್ಪ ಗಾಯಕ್‍ವಾಡ, ಲಾಲೂ ಜಾದವ್, ರಾಜು ಜಾದವ್, ಶಾಂತಾಬಾಯಿ, ಲಲಿತ ಜಾದವ್ ಮತ್ತು ತಾನು ಸೇರಿ ಈ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬಂಧಿತನಿಂದ 1,24,500 ರೂ. ಮೌಲ್ಯದ 28 ಉಂಗುರಗಳನ್ನು ಮತ್ತು ಕಾಲುಂಗರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವೃತ್ತ ನಿರೀಕ್ಷಕ ಕೆ.ಜಿ.ನಿರಂಜನ್‍ಕುಮಾರ್ ತಿಳಿಸಿದ್ದಾರೆ.  ಕಾರ್ಯಾಚರಣೆಯಲ್ಲಿ ಪಿಎಸ್‍ಐ ಕೆ.ಆರ್.ರಘು, ಮುಖ್ಯಪೇದೆಗಳಾದ ಎಸ್.ಎಂ.ರವಿಕುಮಾರ, ಎಂ.ಸಿ.ಪ್ರಕಾಶ್, ಎನ್.ಇ.ಜೈಶಂಕರ್, ಪೇದೆಗಳಾದ ಸಿಎಂ ಲೋಹಿತ್ ಮತ್ತು ಎಂ.ಎಸ್.ಗೌಡ ಭಾಗವಹಿಸಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

Facebook Comments

Sri Raghav

Admin