ಕಾರ್ಯಕ್ರಮಕ್ಕೆ ಗೈರಾದ ಅನಂತಕುಮಾರ್ ಹೆಗಡೆ : ಕಾದು ಸುಸ್ತಾದ ವಿಕಲಾಂಗ ಮಕ್ಕಳು

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar--01

ಧಾರವಾಡ,ಸೆ.17- ಸಚಿವರ ಆಗಮನಕ್ಕಾಗಿ ಗಂಟೆಗಟ್ಟಲೇ ಬಿಸಿಲಿನಲ್ಲಿ ಕಾದು ಕುಳಿತ ದಿವ್ಯಾಂಗ ಮಕ್ಕಳು ಕಾದು ಕಾದು ಸುಸ್ತಾದರೂ ಅತಿಥಿಯಾಗಿ ಆಗಮಿಸಬೇಕಾಗಿದ್ದ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಮಾನವೀಯತೆಯನ್ನೇ ಮರೆತು ಶಾಲೆಗೆ ಬರದೇ ಹಾಗೆಯೇ ಹೊರಟುಹೋದ ಪ್ರಸಂಗ ನಡೆದಿದೆ.  ಮಕ್ಕಳನ್ನು ಕಾಯಿಸಿ ಕೈಕೊಟ್ಟ ಸಚಿವರ ವಿರುದ್ಧ ಪೋಷಕರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಧಾರವಾಡ ಟೋಲ್ ನಾಕಾ ಸಮೀಪ ಇರುವ ಹೊನ್ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಬರಲೇ ಇಲ್ಲ…

ಭಾನುವಾರ ರಜೆ ದಿನವೂ ಕೂಡ ಸಮವಸ್ತ್ರ ಧರಿಸಿ ಶಾಲೆಗೆ ಹಾಜರಾದ ಕಿವುಡ ಮತ್ತು ಮೂಕ ಮಕ್ಕಳು ಸಚಿವರ ಆಗಮನಕ್ಕಾಗಿ ಬಿಸಲಿನಲ್ಲೇ ಕಾದು ಕಾದು ಸುಸ್ತಾದರು. ಸಚಿವರ ಆಗಮನವನ್ನೇ ಎದುರು ನೋಡುತ್ತಿದ್ದ ಶಾಲಾ ಆಡಳಿತ ಮಂಡಳಿಯವರು ಕೂಡ ಹೈರಾಣಾದರು.  ಹೊನ್ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಇಂದು ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಆಹ್ವಾನಿಸಲಾಗಿತ್ತು. ಸಮಯ ನಿಗದಿ ಮಾಡಿದ್ದ ಸಚಿವರು ಯಾವುದೇ ವಿಷಯ ತಿಳಿಸದೆ ಕಾರ್ಯಕ್ರಮಕ್ಕೆ ಗೈರಾಗಿ, ನೇರ ಬೆಳಗಾವಿಗೆ ಪಾದ ಬೆಳೆಸಿದರು.

ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದ ಸಚಿವರು ದಿಢೀರನೇ ಗೈರಾಗಿರುವುದು ಅಸಮಾಧಾನವುಂಟು ಮಾಡಿದ್ದು , ಸೌಜನ್ಯಕ್ಕಾದರೂ ಮಾಹಿತಿ ನೀಡಬೇಕಾಗಿತ್ತು. ಆದರೆ ಸಚಿವರು ಹೀಗೆ ಮಕ್ಕಳನ್ನು ಗಂಟೇ ಗಂಟಲೇ ಕಾಯಿಸಿದ್ದಾರೆ ಎಂದು ಅಲ್ಲಿನ ಆಡಳಿತ ಮಂಡಳಿ ಬೇಸರ ವ್ಯಕ್ತಪಡಿಸಿದೆ.

Facebook Comments

Sri Raghav

Admin