ಕೊರಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರಿಸ್ ನಲ್ಲಿ ಸಿಂಧು ಚಾಂಪಿಯನ್

ಈ ಸುದ್ದಿಯನ್ನು ಶೇರ್ ಮಾಡಿ

Korea--01

ಸಿಯೋಲ್, ಸೆ.17- ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ಜಯಿಸಿ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದ ಭಾರತದ ಬ್ಯಾಡ್ಮಿಂಟನ್ ಧ್ರುವತಾರೆ ಪಿ.ವಿ.ಸಿಂಧು ಅವರು ಮತ್ತೊಮ್ಮೆ ಮೂಲಕ ಕ್ರೀಡಾಲೋಕದಲ್ಲಿ ದಾಖಲೆ ನಿರ್ಮಿಸಿ ಭಾರತದ ಕೀರ್ತಿಯನ್ನು ಬೆಳಗಿಸಿದ್ದಾರೆ.  ಕಳೆದ ಎರಡು ವಾರಗಳ ಹಿಂದಷ್ಟೇ ನಡೆದ ವಿಶ್ವ ಬ್ಯಾಡ್ಮಿಂಟನ್‍ನಲ್ಲಿ ತೀವ್ರ ಜಿದ್ದಾ ಜಿದ್ದಿ ನಡೆಸಿದರೂ ಕೂಡ ಕೊರಿಯಾದ ನಜೊಮಿ ಒಕುಹರಾ ವಿರುದ್ಧ ಸೋಲು ಕಂಡಿದ್ದ ಸಿಂಧು ಇಂದು ಅದೇ ಆಟಗಾರ್ತಿಯ ವಿರುದ್ಧ ಗೆಲ್ಲುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

ಬ್ಯಾಡ್ಮಿಂಟನ್ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಕೊರಿಯಾ ಸೂಪರ್ ಸೀರಿಸ್‍ನ ಮೊದಲ ಸುತ್ತಿನಿಂಲೂ ತೀವ್ರ ಪೈಪೋಟಿ  ನೀಡಿದ ಸಿಂಧು ಮೊದಲ ಸುತ್ತಿನಲ್ಲಿ 22-20ರಲ್ಲಿ ಗೆದ್ದುಕೊಂಡರು. ಎರಡನೇ ಸುತ್ತಿನಲ್ಲಿ ಲಯ ಕಂಡುಕೊಂಡ 8 ನೆ ಶ್ರೇಯಾಂಕಿತದ ನಜೊಮಿ ಒಕುಹರಾ 4ನೆ ಶ್ರೇಯಾಂಕಿತ ಸಿಂಧುಗೆ ತೀವ್ರ ಪ್ರತಿರೋಧ ಒಡ್ಡಿ 11-21ರಿಂದ ಗೆಲ್ಲುವ ಮೂಲಕ ಸೆಟ್‍ಗಳನ್ನು ಸಮಬಲಗೊಳಿಸಿದರು. ಆದರೆ ತೀವ್ರ ಕುತೂಹಲ ಕೆರಳಿಸಿದ್ದ ಅಂತಿಮ ಸುತ್ತಿನಲ್ಲಿ ಸಿಂಧು ವಿರುದ್ಧ ಮತ್ತೆ ಎಡವಿದ ಒಕುಹರಾ 18-21 ರಿಂದ ಸೋಲು ಕಾಣುವ ಮೂಲಕ ಸೋಲು ಕಂಡರು.

ಹಿಂದಿನ ಮುಖಾಮುಖಿಯಲ್ಲಿ ಜಪಾನ್‍ನ ಒಕುರಾವಾ, ಸಿಂಧು ವಿರುದ್ಧ 19-21 , 22-20 , 20-22 ಸೆಟ್‍ನಿಂದ ಜಯಿಸಿ ಬಿಡಬ್ಲ್ಯುಎಫ್ ಚಾಂಪಿಯನ್ಸ್ ಶಿಫ್ ಜಯಿಸಿದರೆ ಇಂದು ಸಿಂಧು ಸೇಡು ತೀರಿಸಿಕೊಳ್ಳುವ ಮೂಲಕ ಕೊರಿಯಾ ಓಪನ್ ಸೂಪರ್ ಸೀರಿಸ್ ಚಾಂಪಿಯನ್ಸ್ ಆಗುವ ಮೂಲಕ ಕೊರಿಯಾ ಒಪನ್ ಸೀರಿಸ್ ಗೆದ್ದ ಮೊದಲ ಆಟಗಾರ್ತಿ ಎಂಬ ದಾಖಲೆಗೆ ಭಾಜನರಾಗಿದ್ದಾರೆ.

ಹರ್ಷೋದ್ಗಾರ:

ಪಿ.ವಿ.ಸಿಂಧು ಕೊರಿಯಾ ಒಪನ್ ಚಾಂಪಿಯನ್ ಆಗುತ್ತಿದ್ದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಎಲ್ಲರ ಬಾಯಲ್ಲೂ ಸಿಂಧುವಿನ ಗುಣಗಾನವೇ ಹೊಮ್ಮಿಬರುತ್ತಿತ್ತು.

ಅಭಿನಂದನೆ:

ಒಂದೇ ವರ್ಷದಲ್ಲಿ 2 ಪ್ರತಿಷ್ಠಿತ ವಿಶ್ವ ಚಾಂಪಿಯನ್ಸ್ ಪ್ರಶಸ್ತಿಯನ್ನು ಗೆದ್ದಿರುವ ಬ್ಯಾಡ್ಮಿಂಟನ್ ಬೆಳ್ಳಿತಾರೆ ಪಿ.ವಿ.ಸಿಂಧುಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರ ದಿಗ್ಗಜರು ಟ್ವಿಟರ್‍ಗಳ ಮೂಲಕ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ.

Facebook Comments

Sri Raghav

Admin