ಖಿನ್ನತೆಗೆ ಔಷಧಿ ತೆಗೆದುಕೊಳ್ಳುವ ಮುನ್ನ ಎಚ್ಚರ..!

Depression--01

ನವದೆಹಲಿ, ಸೆ.17- ಖಿನ್ನತೆ ಚಿಕಿತ್ಸೆಗಾಗಿ ತೆಗೆದುಕೊಳ್ಳುವ ಔಷಧಿಗಳು ಮನುಷ್ಯನ ಬಹುಅಂಗಾಂಗ ವೈಫಲ್ಯಕ್ಕ ಕಾರಣವಾಗಲಿದ್ದು, ಶೀಘ್ರವೇ ಸಾವು ತಂದುಕೊಡಲಿವೆ ಎಂಬ ಆಂತಕಕಾರಿ ಮಾಹಿತಿ ಬಹಿರಂಗವಾಗಿದೆ. ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಖಿನ್ನತೆಯ ಔಷಧಿಗಳ ಅಡ್ಡಪರಿಣಾಮಗಳ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರ ಹಾಕಿದೆ.  ಖಿನ್ನತೆ ಮತ್ತು ಆಂತಕದ ಮನಸ್ಥಿತಿ ನಿವಾರಣೆಗೆ ಚಿಕಿತ್ಸೆ ಪಡೆಯುವ ರೋಗಿಗಳು ಆಲೋಪತಿ ಔಷಧಿಗಳನ್ನು ಸೇವಿಸುವ ಬದಲು ನೈಸರ್ಗಿಕ ವಿಧಾನಗಳನ್ನು ಬಳಸುವುದು ಸೂಕ್ತ ಎಂದು ಸಮೀಕ್ಷೆ ನಡೆಸಿದ ಸಂಸ್ಥೆ ಸಲಹೆ ನೀಡಿದೆ. ಖಿನ್ನತೆಯ ಔಷಧಿ ಸೇವಿಸುವವರು ಹಾಗೂ ಸೇವಿಸದರೇ ಇರುವವರ ಆರೋಗ್ಯ ಪರಿಸ್ಥಿತಿಯನ್ನು ಅಧ್ಯಯನ ನಡೆಸಿದಾಗ ಔಷಧಿ ಸೇವಿಸಿರುವವ ಸಾವಿನ ಸಂಖ್ಯೆ ಶೇ.33ರಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ.

ಶೇ.14ರಷ್ಟು ಜನರಲ್ಲಿ ಹೃದಯಾಘಾತ, ಪಾಶ್ರ್ವವಾಯುವಿನಂತ ಸಮಸ್ಯೆಗಳು ಕಂಡು ಬಂದಿವೆ ಎಂದು ಫಿಜಿಯೋಥೆರಫಿ ಆ್ಯಂಡ್ ಫಿಜಿಯೋಮೆಟಿಕ್ಸ್ ಜರ್ನಲ್ ವರದಿ ಮಾಡಿದೆ. ಸಮೀಕ್ಷೆಯ ನೇತೃತ್ವ ವಹಿಸಿದ್ದ ಕೆನಡಾ ಮ್ಯಾಕ್‍ಮ್ಯಾಸ್ಟರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪೌಲ್‍ಆ್ಯಂಡ್ರೋಸ್, ಖಿನ್ನತೆಗಾಗಿ ತೆಗೆದುಕೊಳ್ಳುವ ಔಷಧಿಗಳು ಅತ್ಯಂತ ಅಪಾಯಕಾರಿ. ಹೃದಯ, ಕಿಡ್ನಿ, ಶ್ವಾಸಕೋಸ, ಪಿತ್ತಜನಾಂಕಗದಂತಹ ಬಹು ಅಂಗಾಗಂಗಳನ್ನು ದುರ್ಬಲಗೊಳಿಸಲಿದೆ. ಗರ್ಭಾಪಾತದ ಸಮಸ್ಯೆಗಳೂ ಹೆಚ್ಚಾಗಲಿವೆ. ನಮ್ಮ ಸಮೀಕ್ಷೆಯಲ್ಲಿ ಕಂಡು ಬಂದ ಫಲಿತಾಂಶ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ.

ಸಮೀಕ್ಷೆಗೆ ಸಹಾಯಕರಾಗಿ ಕೆಲಸ ಮಾಡಿದ ಮಾರ್ಥಮಸಲ್‍ಜೆ, ಜನ ಖಿನ್ನತೆಗಾಗಿ ಔಷಧಿಗೆ ಮೊರಹೋಗುವ ಬದಲು ನೈಸರ್ಗಿಕ ದಾರಿಯ ಮೂಲಕ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು.

Facebook Comments

Sri Raghav

Admin