ಡೇವಿಸ್ ಕಪ್ ಟೂರ್ನಿ : ಭಾರತಕ್ಕೆ 1-2 ಹಿನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

Bopanna

ಎಡ್ಮಂಟನ್,ಸೆ.17- ಇಲ್ಲಿ ನಡೆದ ಡೇವಿಸ್ ಕಪ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡಿ ಮುಗ್ಗರಿಸಿದ್ದು ,ಭಾರತ 1-2ರ ಹಿನ್ನಡೆ ಅನುಭವಿಸಿದೆ. ರೋಹನ್ ಬೊಪಣ್ಣ ಮತ್ತು ಪೂರ್ವರಾಜ ಜೋಡಿಯು 5-7, 5-7 , 7-5, 3-6 ಸೆಟ್‍ಗಳಿಂದ ಕೆನಡಾದ ಡೇನಿಯಲ್ ನೆಸ್ಟರ್ ಮತ್ತು ವಸೆಕ್ ಪೊಸ್ಪಿಸಿಲ್ ಜೋಡಿ ವಿರುದ್ಧ ಸೋಲು ಅನುಭವಿಸಿದರು. ಎರಡು ಗಂಟೆ 52 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮೊದಲ ಎರಡು ಸೆಟ್‍ನಲ್ಲಿ ಭಾರತದ ಜೋಡಿಯು ಸೋಲು ಅನುಭವಿಸಿತ್ತು. 3ನೇ ಸೆಟ್‍ನಲ್ಲಿ ಕೆನಡಾ ಜೋಡಿಗೆ ತಿರುಗೇಟು ನೀಡಿದ ಬೊಪಣ್ಣ ಜೋಡಿಯು 4ನೇ ಸೆಟ್‍ನಲ್ಲಿ ಸೋಲು ಕಂಡಿತು.

ನೆಸ್ಟರ್ ಜೋಡಿಯ ಪ್ರಬಲ ಸರ್ವ್ ಹಾಗೂ ಡ್ರಾಕ್ ಶಾಟ್‍ಗಳ ಪ್ರದರ್ಶನಕ್ಕೆ ರೋಹನ ಬೊಪ್ಪಣ್ಣ ಜೋಡಿಯು ತತ್ತರಿಸಿತು. ಎದುರಾಳಿ ಆಟಗಾರರನ್ನು ಸೋಲಿಸಲು ಉತ್ತಮ ಆಟವಾಡಿದರೂ ಹಿನ್ನಡೆ ಅನುಭವಿಸುವಂತಾಯಿತು ಎಂದು ಬೊಪ್ಪಣ್ಣ ಹೇಳಿದರು.

Facebook Comments

Sri Raghav

Admin