ದೇಶಕ್ಕೆ ಮೋದಿ ಬರ್ತ್‍ಡೇ ಗಿಫ್ಟ್ : ವಿಶ್ವದ 2ನೇ ದೊಡ್ಡ ಡ್ಯಾಂ ಲೋಕಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

Modi-Dam--01

ಗಾಂಧಿನಗರ, ಸೆ.17-ವಿಶ್ವದ ಎರಡನೇ ಅತಿದೊಡ್ಡ ಸರ್ದಾರ್ ಸರೋವರ್ ಡ್ಯಾಮನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಿದ್ದಾರೆ. 56 ವರ್ಷಗಳ ಬಳಿಕ ಈ ಮಹತ್ವದ ಯೋಜನೆ ಸಾಕಾರಗೊಂಡಿದ್ದು, ತಮ್ಮ 67ನೇ ಜನ್ಮದಿನದಂದೇ ಮೋದಿ ದೇಶಕ್ಕೆ ಉಡುಗೊರೆ ನೀಡಿದ್ದಾರೆ. ಅಣೆಕಟ್ಟನ್ನು ದೇಶಕ್ಕೆ ಸಮರ್ಪಿಸುವುದಕ್ಕೆ ಮುನ್ನ ಮೋದಿ ಸರ್ದಾರ್ ವಲ್ಲಭ್‍ಬಾಯಿ ಪಟೇಲ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಪುಷ್ಪಾಂಜಲಿ ಸಮರ್ಪಿಸಿದರು. ನಂತರ ಡ್ಯಾಂ ಉದ್ಘಾಟಿಸಿ, ನರ್ಮದಾ ನದಿಗೆ ವಿಶೇಷ ಪೂಜೆ ಸಲ್ಲಿಸಿದರು.

DJ6A23AUQAAc1uR

ಪ್ರಥಮ ಪ್ರಧಾನಮಂತಿ ಪಂಡಿತ್ ಜವಹರ್‍ಲಾಲ್ ನೆಹರು ಅವರು ಸರ್ದಾರ್ ಸರೋವರ್ ಆಣೆಕಟ್ಟು ಯೋಜನೆಗೆ ಶಿಲಾನ್ಯಾಸ ಮಾಡಿ 56 ವರ್ಷಗಳ ಬಳಿಕ ಕಳೆದ ಜೂನ್ 17ರಂದು ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಏಪ್ರಿಲ್ 5, 1961ರಂದು ನೆಹರು ಈ ಯೋಜನೆಗೆ ನರ್ಮದಾ ಜಿಲ್ಲೆಯ ಕೆವಾಡಿಯಾ ಗ್ರಾಮದಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು.  ವಿಶ್ವದ ಎರಡನೇ ಬೃಹತ್ ಅಣೆಕಟ್ಟು ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಡ್ಯಾಂ ಎತ್ತರವನ್ನು 138.68 ಮೀಟರ್‍ಗಳಿಗೆ ಹೆಚ್ಚಿಸಲಾಗಿದೆ. ವಿಶಿಷ್ಟ ತಂತ್ರಜ್ಞಾನದೊಂದಿಗೆ ಕಾಂಕ್ರೀಟ್ ಬಳಸಿ ನಿರ್ಮಿಸಿರುವ ಡ್ಯಾಂ ಎತ್ತರವನ್ನು ಹೆಚ್ಚಿಸಿರುವುದರಿಂದ ಇದರಲ್ಲಿ ಬಳಕೆ ಮಾಡಬಹುದಾದ ನೀರಿನ ಪ್ರಮಾಣ 4.73 ಎಕರೆ ಅಡಿ (ಎಂಎಎಫ್) ಆಗಲಿದ್ದು, ಗುಜರಾತ್, ರಾಜಸ್ತಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನೀರುಣಿಸಲಿದೆ.

DJ56PVwUMAADHvZ

ಮಹತ್ವದ ಯೋಜನೆಯಿಂದ ಸುಮಾರು 10 ಲಕ್ಷ ರೈತರ ಹೊಲ-ಗದ್ದೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ನಾಲ್ಕು ಕೋಟಿ ಮಂದಿಗೆ ಕುಡಿಯುವ ನೀರು ಪೂರೈಸಲಿದೆ. ಡ್ಯಾಂನಿಂದ 65,000 ಮೆಗವ್ಯಾಟ್ ಸಾಮಥ್ರ್ಯದ ವಿದ್ಯುತ್ ಉತ್ಪಾದಿಸಲಾಗುವುದು. ಡ್ಯಾಂ ಲೋಕಾರ್ಪಣೆ ಸಂದರ್ಭದಲ್ಲಿ ಕೇಂದ್ರ ಸಚಿವರುಗಳು, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು.
ಕೈಕೊಟ್ಟ ಹೆಲಿಕಾಪ್ಟರ್ : ಇದಕ್ಕೂ ಮುನ್ನ ಮೋದಿ ಅವರು ನರ್ಮದಾ ಜಿಲ್ಲೆಯ ಕೆವಾಡಿಯಾಗೆ ಹೆಲಿಕಾಪ್ಟರ್‍ನಲ್ಲಿ ತೆರಳಬೇಕಿತ್ತು. ಆದರೆ ನರ್ಮದಾ ನದಿ ಪ್ರಾತದ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನದಿಂದ ಹೆಲಿಕಾಪ್ಟರ್ ದಭೋಯ್‍ನಲ್ಲಿ ಭೂಸ್ಪರ್ಶ ಮಾಡಿತು. ನಂತರ ಅವರು ರಸ್ತೆ ಮಾರ್ಗವಾಗಿ ತೆರಳಿದರು.

DJ55ilHVwAAz3s6

Facebook Comments

Sri Raghav

Admin