ಪ್ರಧಾನಿ ಮೋದಿ ಕುರಿತು ಅಶ್ಲೀಲ ಪದಬಳಸಿ ತಿವಾರಿ ಟ್ವೀಟ್

ಈ ಸುದ್ದಿಯನ್ನು ಶೇರ್ ಮಾಡಿ

Manish-Tiwari

ನವದೆಹಲಿ ಸೆ. 17 : ಕಾಂಗ್ರೆಸ್ ನ ಹಿರಿಯ ಮುಖಂಡರಲ್ಲೊಬ್ಬರಾದ ಮನೀಶ್ ತಿವಾರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟಾರ್ಗೆಟ್ ಮಾಡಿ ಅಶ್ಲೀಲ ಪದಗಳನ್ನು ಬಳಸಿ ಟ್ವೀಟ್ ಮಾಡುವ ಮೂಲಕ ವಿವಾದದಲ್ಲಿ ಸಿಲುಕಿದ್ದಾರೆ. ಈ ಟ್ವೀಟ್ ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು ತಿವಾರಿಗೆ ಟ್ವಿಟಿಗರು ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಹುಟ್ಟುಹಬ್ಬದ ದಿನದಂತೆ ಮೋದಿ ಕುರಿತು ತಿವಾರಿ ಮಾಡಿದ ಟ್ವೀಟ್ ಗೆ ಬಿಜೆಪಿಯವರು ತಿವಾರಿ ಪದಬಳಕೆಯನ್ನು ಖಂಡಿಸುತ್ತಿದ್ದಾರೆ. ಹಾಗೂ ತಿವಾರಿ ವಿವಾದಾತ್ಮಕ ಟ್ವೀಟ್ ಕುರಿತು ಸೋನಿಯಾ ಮತ್ತು ರಾಹುಲ್ ಪ್ರತಿಕ್ರಿಯೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

Facebook Comments

Sri Raghav

Admin