ಯುಪಿಯಲ್ಲಿ ಯೋಗಿ ಸರ್ಕಾರ ಬಂದ 6 ತಿಂಗಳಲ್ಲಿ ಪೊಲೀಸರಿಂದ 420 ಎನ್‍ಕೌಂಟರ್

ಈ ಸುದ್ದಿಯನ್ನು ಶೇರ್ ಮಾಡಿ

Yogi-Adityanath--01

ಲಕ್ನೋ, ಸೆ.17-ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರ ಅಸ್ತಿತ್ವಕ್ಕೆ ಬಂದ ಆರು ತಿಂಗಳ ಅವಧಿಯಲ್ಲಿ ಉತ್ತರಪ್ರದೇಶ ಪೊಲೀಸರು 420 ಎನ್‍ಕೌಂಟರ್‍ಗಳನ್ನು ನಡೆಸಿ 15 ಮಂದಿಯನ್ನು ಹತ್ಯೆ ಮಾಡಿದ್ದಾರೆ.  ಲಕ್ನೋದ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಬಿಡುಗಡೆಗೊಳಿಸಲಾದ ಅಧಿಕೃತ ಅಂಕಿ-ಸಂಖ್ಯೆ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ. ಈ ಎನ್‍ಕೌಂಟರ್‍ಗಳಲ್ಲಿ ಚಿತ್ರಕೂಟದಲ್ಲಿ ದರೋಡೆಕೋರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸಬ್‍ಇನ್ಸ್‍ಪೆಕ್ಟರ್ ಜೈಪ್ರಕಾಶ್ ಸಿಂಗ್ ಮೃತಪಟ್ಟಿದ್ದಾರೆ.

ದತ್ತಾಂಶದ ಪ್ರಕಾರ ಮಾರ್ಚ್ 20 ಮತ್ತು ಸೆಪ್ಟೆಂಬರ್ 14ರ ನಡುವೆ ನಡೆದ ಗುಂಡಿನ ಕಾಳಗದಲ್ಲಿ 88 ಪೊಲೀಸರು ಗಾಯಗೊಂಡಿದ್ಧಾರೆ. ಸೆಪ್ಟೆಂಬರ್ 12 ರಿಂದ 14ರವರೆಗೆ 48 ಗಂಟೆಗಳಲ್ಲಿ ನಡೆದ ಎನ್‍ಕೌಂಟರ್‍ಗಳಲ್ಲಿ 10 ಕ್ರಿಮಿನಲ್‍ಗಳು ಹತರಾಗಿದ್ಧಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Facebook Comments

Sri Raghav

Admin