ವಿದ್ಯುತ್ ಕಿಡಿ ತಾಗಿ ಮರ ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಸೆ.17-ವಿದ್ಯುತ್ ಕಿಡಿ ಸಿಡಿದು ಮರವೊಂದು ಸಂಪೂರ್ಣ ಭಸ್ಮವಾಗಿರುವ ಘಟನೆ ನಡೆದಿದೆ.  ಎಚ್.ಡಿ.ಕೋಟೆ ತಾಲ್ಲೂಕು ಹಾದನೂರು ಗ್ರಾಮದಲ್ಲಿ ಮರದ ಮೇಲೆಯೇ ವಿದ್ಯುತ್ ತಂತಿ ಹಾದುಹೋಗಿದೆ. ಈ ಬಗ್ಗೆ ಈಗಾಗಲೆ ಗ್ರಾಮಸ್ಥರು ಚೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.  ಆದರೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷವಹಿಸಿದ್ದು , ಗಾಳಿ ಬೀಸಿದಾಗ ಇಂದು ಮರಕ್ಕೆ ಬೆಂಕಿಯ ಕಿಡಿ ತಾಗಿ ಮರ ಸುಟ್ಟುಹೋಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಬೆಂಕಿ ಹೊತ್ತಿ ಉರಿದಿದೆ.  ಗ್ರಾಮಸ್ಥರು ಚೆಸ್ಕಾಂ ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin