ವಿಶ್ವಸಂಸ್ಥೆ ಸಭೆಯಲ್ಲಿ ಸುಷ್ಮಾ-ಪಾಕ್ ವಿದೇಶಾಂಗ ಸಚಿವ ಮುಖಾಮುಖಿ

ಈ ಸುದ್ದಿಯನ್ನು ಶೇರ್ ಮಾಡಿ

Sushma-Swaraj--01

ನವದೆಹಲಿ, ಸೆ.17-ಭಾರತ-ಪಾಕಿಸ್ತಾನ ಸಂಬಂಧ ಮತ್ತಷ್ಟು ಹದಗೆಡುತ್ತಿರುವ ಸಂದರ್ಭದಲ್ಲೇ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಮುಂದಿನ ವಾರ ನ್ಯೂಯಾರ್ಕ್‍ನಲ್ಲಿ ಪಾಕ್ ಸಹವರ್ತಿ ಖ್ವಾಜಾ ಆಸೀಫ್ ಅವರೊಂದಿಗೆ ಮುಖಾ-ಮುಖಿಯಾಗಿಲಿದ್ದು ಈ ವಿದ್ಯಮಾನ ಕುತೂಹಲ ಕೆರಳಿಸಿದೆ.ವಿಶ್ವಸಂಸ್ಥೆ ಸಾಮಾನ್ಯ ಸಭೆಯ(ಎನ್‍ಎನ್‍ಜಿಎ) 72ನೇ ಅಧಿವೇಶದ ಸಂದರ್ಭದಲ್ಲಿ ಈ ಇಬ್ಬರು ನಾಯಕರು ಶಾಂಘೈ ಸಹಕಾರ ಸಂಘಟನೆ (ಎಸ್‍ಸಿಒ) ಶೃಂಗಸಭೆ ಮತ್ತು ಸಾರ್ಕ್ ಸಮೂಹ ಸಭೆಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಸುಷ್ಮಾ ಅವರು ಜಿ-77, ಎಸ್‍ಯು, ಜಿ-4 ಮತ್ತು ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾ) ಸಭೆಗಳೂ ಸೇರಿದಂತೆ 15ಕ್ಕೂ ಹೆಚ್ಚು ಸಮಾವೇಶಗಳಲ್ಲಿ ಪಾಲ್ಗೊಳ್ಳುವರು.  ವಿದೇಶಾಂಗ ಸಚಿವರು ನಾಳೆ ನ್ಯೂಯಾರ್ಕ್ ತಲುಪಲಿದ್ದು, ಎಂಟು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಮತ್ತು ಸಭೆಗಳನ್ನು ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

Facebook Comments

Sri Raghav

Admin