ಶೀಘ್ರ 61 ಹೊಸ ನ್ಯಾಯಾಧೀಶರ ನೇಮಕ ಮತ್ತು ಪದೋನ್ನತಿ

ಈ ಸುದ್ದಿಯನ್ನು ಶೇರ್ ಮಾಡಿ

Judges--01

ನವದೆಹಲಿ, ಸೆ.17-ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಹೊಸ ನ್ಯಾಯಾಧೀಶರ ನೇಮಕ ಮತ್ತು ಪದೋನ್ನತಿಗೆ ಕಾಲ ಸನ್ನಿಹಿತವಾಗಿದೆ. ನೂತನ ನ್ಯಾಯಾಧೀಶರ ನೇಮಕ ಮತ್ತು ಹೆಚ್ಚುವರಿ ನ್ಯಾಯಮೂರ್ತಿಗಳ ಬಡ್ತಿಗಾಗಿ ಕರ್ನಾಟಕ ಸೇರಿದಂತೆ ದೇಶದ 13 ಹೈಕೋರ್ಟ್‍ಗಳು ಶಿಫಾರಸು ಮಾಡಿರುವ 61 ಹೆಸರುಗಳು ಸುಪ್ರೀಂಕೋರ್ಟ್ ಕೊಲಿಜಿಯಂನ(ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಹಿರಿಯ ನ್ಯಾಯಾಧೀಶರ ಸಂಸ್ಥೆ) ಅಂತಿಮ ಒಪ್ಪಿಗೆ ಪ್ರತೀಕ್ಷೆಯಲ್ಲಿದೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊಸ ನ್ಯಾಯಾಧೀಶರ ನೇಮಕಕ್ಕೆ ಎಂಟು ಹೈಕೋರ್ಟ್‍ಗಳಿಂದ 36 ಹೆಸರುಗಳು ಹಾಗೂ ಹೆಚ್ಚುವರಿ ನ್ಯಾಯಾಧೀಶರನ್ನು ಖಾಯಂ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲು ಐದು ಉಚ್ಚ ನ್ಯಾಯಾಲಯಗಳು 25 ಹೆಸರುಗಳನ್ನು ಶಿಫಾರಸು ಮಾಡಿವೆ.

Facebook Comments

Sri Raghav

Admin