ಎಂಎಲ್‍ಸಿ ಆಗಿ ಯೋಗಿ ಆದಿತ್ಯನಾಥ , ಇಬ್ಬರು ಡಿಸಿಎಂಗಳ ಪ್ರಮಾಣ

ಈ ಸುದ್ದಿಯನ್ನು ಶೇರ್ ಮಾಡಿ

Yogi--01

ಲಕ್ನೋ, ಸೆ.18-ಉತ್ತರಪ್ರದೇಶ ವಿಧಾನಪರಿಷತ್ ಸದಸ್ಯರುಗಳಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಇಬ್ಬರು ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಲಕ್ನೋದಲ್ಲಿ ಇಂದು ನಡೆದ ಸಮಾರಂಭದಲ್ಲಿ ವಿದಾನಪರಿಷತ್ ಸಭಾಪತಿ ರಮೇಶ್ ಯಾದವ್ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.

ಇದೇ ಸಂದರ್ಭದಲ್ಲಿ ಇನ್ನಿಬ್ಬರು ಸಚಿವರಾದ ಸ್ವತಂತ್ರದೇವ್ ಸಿಂಗ್ ಮತ್ತು ಮೊಹಿಸಿನ್ ರಾಝಾ ಅವರು ಸಹ ಪ್ರಮಾಣ ವಚನ ಸ್ವೀಕರಿಸಿದರು. ಮೇಲ್ಮನೆಯಲ್ಲಿ ಖಾಲಿ ಇದ್ದ ಐದು ಸ್ಥಾನಗಳಿಗೆ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಈ ಐವರು ಅವಿರೋಧವಾಗಿ ಆಯ್ಕೆಯಾಗಿದ್ದರು.

Facebook Comments

Sri Raghav

Admin