ಕನ್ಯಾ ಸಂಸ್ಕಾರ ವಿರೋಧಿಸಿ ರಾಘವೇಶ್ವರ ಶ್ರೀಗಳ ವಿರುದ್ಧ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

raghaveshwara

ಬೆಂಗಳೂರು, ಸೆ.18-ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳ ಕನ್ಯಾ ಸಂಸ್ಕಾರ ವಿರೋಧಿಸಿ ಸೆ.22 ರಂದು ಟೌನ್‍ಹಾಲ್ ಮುಂದೆ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಆರ್.ಎಂ.ಎನ್.ರಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಅನ್ವಯ ಕಾನೂನಿನ ಮುಂದೆ ಪ್ರತಿಯೊಬ್ಬರೂ ಸಮಾನರು.

ಆದರೆ ಶ್ರೀಗಳ ವಿರುದ್ಧ ಈಗಾಗಲೇ ಎರಡೆರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇಂತಹ ಆರೋಪಗಳನ್ನು ಹೊತ್ತಿರುವ ಶ್ರೀಗಳು ಕನ್ಯಾಸಂಸ್ಕಾರವನ್ನು ಮುಂದುವರೆಸಿದ್ದು, ಇದನ್ನು ತಡೆಯಲು ಸಂಬಂಧಪಟ್ಟ ಇಲಾಖೆಗಳು ಮುಂದಾಗದಿರುವುದು ಆತಂಕಕಾರಿ ಎಂದರು.
ಸರ್ಕಾರ ಈಕೂಡಲೇ ಒಂದು ಸಮಿತಿ ರಚಿಸಿ ಕನ್ಯಾಸಂಸ್ಕಾರದ ಅಸಲಿಯತೆ ಯನ್ನು ಬಲಿಗೆಳೆಯಬೇಕು ಮತ್ತು ಇದುವರೆಗೂ ಕನ್ಯಾಸಂಸ್ಕಾರ ನಡೆದಿರುವ ಹೆಣ್ಣು ಮಕ್ಕಳನ್ನು ವಿಚಾರಣೆಗೊಳಪಡಿಸಿ ಅದರ ಗೌಪ್ಯತೆಯನ್ನು ಕಾಪಾಡುವುದರ ಜೊತೆಗೆ ಅವರಿಗೆ ರಕ್ಷಣೆ ನೀಡಬೇಕು. ಹೋರಾಟಗಾರರಿಗೆ ಸರ್ಕಾರ ರಕ್ಷಣೆ ನೀಡಬೇಕು.

ಸದರಿ ಶ್ರೀಗಳಿಂದ ಅನ್ಯಾಯಕ್ಕೊಳಗಾದ ಕೆಲವು ಯುವತಿಯರು ದೂರು ನೀಡಲು ತಯಾರಿದ್ದು ಅವರಿಗೆ ಸೂಕ್ತ ರಕ್ಷಣೆ ನೀಡಿ ಅವರನ್ನು ಗೌಪ್ಯವಾಗಿ ವಿಚಾ ರಣೆ ಮಾಡಲು ಸರ್ಕಾರ ಸಂಬಂಧ ಪಟ್ಟ ಇಲಾಖೆಗೆ ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.  ಕನ್ಯಾ ಸಂಸ್ಕಾರದ ವಿಷಯವಾಗಿ ಹೋರಾಟ ಮಾಡಿದ ಹೋರಾಟಗಾರರಿಗೆ ಏನೇ ಆದರೂ ಅದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸದರಿ ಶ್ರೀಗಳೇ ಹೊಣೆಗಾರರಾಗುತ್ತಾರೆ ಎಂಬುದನ್ನು ಪರಿಗಣಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸಲಾಗುತ್ತಿದೆ ಎಂದರು.  ಕರ್ನಾಟಕ ಪ್ರಗತಿಪರ ಚಳವಳಿಗಾರರ ಸಮಿತಿ ರಾಜ್ಯಾಧ್ಯಕ್ಷ ಪಿ.ರಾಜಣ್ಣ, ದಲಿತ ಸೇವಾ ಸಂಘದ ರಾಜ್ಯಾಧ್ಯಕ್ಷ ಜೆ.ಚಂದ್ರಪ್ಪ, ಕರ್ನಾಟಕ ರಾಜ್ಯ ದಲಿತ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಜಿ.ವೇಲು, ಕರ್ನಾಟಕ ಕಾರ್ಮಿಕ ಸೇವೆ ರಾಜ್ಯಾಧ್ಯಕ್ಷೆ ಭೀಮಾಪುತ್ರಿ ರೇವತಿರಾಯ್ ಉಪಸ್ಥಿತರಿದ್ದರು.

Facebook Comments

Sri Raghav

Admin