ಕೋಲಾರ ಜಿಲ್ಲೆಯ ಜಕ್ಕಸಂದ್ರದಲ್ಲಿ 151 ಕೋಟಿ ರೂ ಕೈಗಾರಿಕಾ ಯೋಜನೆಗೆ ಕೇಂದ್ರ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

Jakkasandre-z---0

ನವದೆಹಲಿ, ಸೆ.18-ಕರ್ನಾಟಕದ ಕೋಲಾರ ಜಿಲ್ಲೆಯ ಜಕ್ಕಸಂದ್ರದಲ್ಲಿ 151.60 ಕೋಟಿ ರೂ. ವೆಚ್ಚದ ಕೈಗಾರಿಕಾ ಪ್ರದೇಶ ಅಭಿವೃದ್ದಿ ಯೋಜನೆ ಕೈಗೊಳ್ಳಲು ಕೇಂದ್ರದ ಹಸಿರು ಸಮಿತಿಯೊಂದು ಸಮ್ಮತಿ ನೀಡಿದೆ. ಹಸಿರು ಮಂಡಳಿಯ ತಜ್ಞರ ಸಾಧನಶ್ರೇಣಿ ಸಮಿತಿ (ಇಎಸಿ) ಮಾಡಿರುವ ಶಿಫಾರಸು ಆಧಾರದ ಮೇಲೆ ಕೇಂದ್ರ ಪರಿಸರ ಸಚಿವಾಲಯವು ಅಂತಿಮ ಒಪ್ಪಿಗೆ ನೀಡಿದ ನಂತರ ಯೋಜನೆ ಕಾರ್ಯಾರಂಭವಾಗಲಿದೆ.

ಪ್ರಸ್ತಾವನೆ ಪ್ರಕಾರ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಕೋಲಾರ ಜಿಲ್ಲೆಯ ಜಕ್ಕಸಂದ್ರ ಗ್ರಾಮದ 627.47 ಎಕರೆ ಪ್ರದೇಶದಲ್ಲಿ ಕೈಗಾರಿಕೆ ವಲಯವನ್ನು ಅಭಿವೃದ್ದಿಗೊಳಿಸಲಿದೆ. ನವೋದ್ಯಮಗಳು, ಹೊಸ ಉದ್ದಿಮೆ ಪ್ರೋತ್ಸಾಹ ಕೇಂದ್ರಗಳು ಮತ್ತು ಜ್ಞಾನ-ಆಧಾರಿತ ವಾಣಿಜ್ಯೋದ್ಯಮ ಅಭಿವೃದ್ದಿ ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.

Facebook Comments

Sri Raghav

Admin