ವೀರಾಗ್ರಣಿ ಅರ್ಜನ್ ಸಿಂಗ್‍ಗೆ ಭಾವಪೂರ್ಣ ವಿದಾಯ

ಈ ಸುದ್ದಿಯನ್ನು ಶೇರ್ ಮಾಡಿ

Arjun-Singh--014

ನವದೆಹಲಿ,ಸೆ.18-ಶನಿವಾರ ನಿಧನರಾದ ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ, ಮಾರ್ಷಲ್ ಆಫ್ ಏರ್‍ಫೋರ್ಸ್ ಅರ್ಜನ್ ಸಿಂಗ್‍ರವರ ಅಂತ್ಯಕ್ರಿಯೆ ದೆಹಲಿಯ ಬ್ರಾರ್ ಸ್ಕ್ವೇರ್‍ನಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಭಾರತೀಯ ವಾಯುಪಡೆಯ ಮೊದಲ ಸರ್ವ ಶ್ರೇಷ್ಠ ಮಾರ್ಷಲ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅರ್ಜನ್ ಸಿಂಗ್(98) ಅವರು ಹೃದಯಾಘಾತದಿಂದ ಶನಿವಾರ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಅಂತ್ಯಸಂಸ್ಕಾರಕ್ಕೆ ಮುನ್ನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಬಿಜೆಪಿ ವರಿಷ್ಠ ನಾಯಕ ಎಲ್.ಕೆ ಆಡ್ವಾಣಿ, ಮೂರೂ ಸೇನಾಪಡೆಗಳ ಮುಖ್ಯಸ್ಥರು ಅರ್ಜನ್ ಸಿಂಗ್‍ಅವರಿಗೆ ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆಗೂ ಮುನ್ನ ಅವರ ನಿವಾಸದಿಂದ ದೆಹಲಿಯ ಕಂಟೋನ್ಮೆಂಟ ಪ್ರದೇಶದವರೆಗೂ ಅರ್ಜುನ್ ಸಿಂಗ್‍ರವರ ಅಂತಿಮ ಯಾತ್ರೆ ನಡೆಸಲಾಯಿತು. ಕಂಟೋನ್ಮೆಂಟ್‍ನಲ್ಲಿ 17 ಸುತ್ತು ಗುಂಡು ಹಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು.

Arjun-Singh--013

ಫೈವ್ ಸ್ಟಾರ್ ರ್ಯಾಂಕ್ ಭಾರತೀಯ ವಾಯುಪಡೆಯ ಏಕೈಕ ಅಧಿಕಾರಿ ಕೂಡ ಅರ್ಜನ್‍ಸಿಂಗ್ ಆಗಿದ್ದರು. 1965 ರ ಯುದ್ಧದಲ್ಲಿ ವಾಯುಪಡೆಯ ನೇತೃತ್ವ ವಹಿಸಿದ್ದ ಸಿಂಗ್, ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಮArjun-Singh--012ಹತ್ವದ ಪಾತ್ರ ವಹಿಸಿದ್ದರು. ಮಾರ್ಷಲ್ ಆಫ್ ಏರ್‍ಫೋರ್ಸ್ ಅರ್ಜನ್ ಸಿಂಗ್ ವಿಧಿವಶ ಗಣ್ಯರ ಸಂತಾಪ ಪದ್ಮ ವಿಭೂಷಣ ಸೇರಿದಂತೆ ಅನೇಕ ಗೌರವಗಳಿಗೆ ಅರ್ಜನ್ ಸಿಂಗ್ ಪಾತ್ರರಾಗಿದ್ದರು. 1969ರಲ್ಲಿ ವಾಯು ಪಡೆಯಿಂದ ನಿವೃತ್ತಿ ಹೊಂದಿದ್ದ ಅವರು, ನಂತರ 1971ರಲ್ಲಿ ಸ್ವಿಟ್ಜರ್‍ಲ್ಯಾಂಡ್ ರಾಯಭಾರಿ ಹಾಗೂ 1974ರಲ್ಲಿ ಕೀನ್ಯಾ ರಾಯಭಾರಿಯಾಗಿದ್ದರು. 1989ರಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದರು.

Arjun-Singh--015

 

Facebook Comments

Sri Raghav

Admin