ಉ.ಕೊರಿಯಾ, ಪಾಕ್, ಚೀನಾ ವಿರುದ್ಧ ಸುಷ್ಮಾ ವಾಗ್ಬಾಣ

ಈ ಸುದ್ದಿಯನ್ನು ಶೇರ್ ಮಾಡಿ

Sushma--01

ನವದೆಹಲಿ, ಸೆ.19-ಏಷ್ಯಾ ರಾಷ್ಟ್ರಗಳಿಗೆ ಪದೇ ಪದೇ ಆತಂಕವೊಡ್ಡುತ್ತಿರುವ ಉತ್ತರ ಕೊರಿಯಾ, ಪಾಕಿಸ್ತಾನ ಮತ್ತು ಚೀನಾ ವಿರುದ್ಧ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ನ್ಯೂಯಾರ್ಕ್‍ನಲ್ಲಿರುವ ಸುಷ್ಮಾ ಭಾರತ-ಅಮೆರಿಕ-ಜಪಾನ್ ತ್ರಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಾ ಪಾಕಿಸ್ತಾನವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ಕೊರಿಯಾದ ಅಣ್ವಸ್ತ್ರ ಮತ್ತು ಕ್ಷಿಪಣಿ ಪ್ರಯೋಗಗಳು ಮತ್ತು ಅದಕ್ಕೆ ಇರುವ ಸಂಪರ್ಕಗಳ ಬಗ್ಗೆ ತನಿಖೆಯಾಗಬೇಕು. ಆಗ ಆದರ ಹಿಂದಿರುವ ಸಂಗತಿಗಳು ಬೆಳಕಿಗೆ ಬರುತ್ತವೆ ಎಂದು ಅವರು ಹೇಳಿದರು. ಪಾಕಿಸ್ತಾನ-ಉತ್ತರ ಕೊರಿಯಾ ನಡುವೆ ಅಣ್ವಸ್ತ್ರ ಸಂಬಂಧಗಳಿವೆ ಎಂದು ಅಮೆರಿಕ ತನಿಖಾ ಸಂಸ್ಥೆಗಳು ಗುಮಾನಿ ವ್ಯಕ್ತಪಡಿಸಿದ ಬೆನ್ನಲ್ಲೇ ಸುಷ್ಮಾ ಅವರ ಈ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ.  ಇದೇ ವೇಳೆ ಈಶಾನ್ಯ ಭಾರತದ ಗಡಿಯಲ್ಲಿ ಏಕ ಪಟ್ಟಿ ಮತ್ತು ಏಕ ರಸ್ತೆ ಎಂಬ ಏಕಪಕ್ಷೀಯ ನಿಲುವಿನೊಂದಿಗೆ ಚೀನಾ ಕೈಗೊಂಡಿರುವ ರಸ್ತೆ ನಿರ್ಮಾಣ ಯೋಜನೆ ಬಗ್ಗೆಯೂ ಸುಷ್ಮಾ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಅಮೆರಿಕ ಮತ್ತು ಜಪಾನ್ ದೇಶಗಳು ಸಹ ಇದೇ ಅಭಿಪ್ರಾಯದೊಂದಿಗೆ ಸಚಿವರಿಗೆ ಬೆಂಬಲ ಸೂಚಿಸಿವೆ.  ಈ ಸಭೆಯ ನಂತರ ಅವರು ಟುನಿಷ್ಯಾ, ಬಹರೈನ್, ಲಾಟ್ವಿಯಾ, ಯುನೈಟೆಡ್ ಅರಬ್ ಎಮಿರೆಟ್ಸ್ ಮತ್ತು ಡೆನ್ಮಾರ್ಕ್ ವಿದೇಶಾಂಗ ಸಚಿವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧ ಬಲವರ್ಧನೆ ಕುರಿತು ಚರ್ಚಿಸಿದರು.

Facebook Comments

Sri Raghav

Admin