ದಸರಾಗೆ ಭದ್ರತೆಗೆ 4500 ಹೆಚ್ಚುವರಿ ಪೊಲೀಸರ ನಿಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

Mysuru-Dasara--01

ಮೈಸೂರು,ಸೆ.19-ದಸರಾ ಮಹೋತ್ಸವದ ಭದ್ರತೆಗಾಗಿ ಬೇರೆ ಬೇರೆ ಜಿಲ್ಲೆಗಳಿಂದ 4500 ಪೊಲೀಸರನ್ನು ಕರೆಸಿಕೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸುಬ್ರಮಣೇಶ್ವರ್ ರಾವ್ ತಿಳಿಸಿದರು. ವಿಶ್ವವಿಖ್ಯಾತ ದಸರಾ ಸಂದರ್ಭದಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ಅಗತ್ಯ ಭದ್ರತೆ ಒದಗಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರು ಎರಡು ತಂಡಗಳಲ್ಲಿ ಆಗಮಿಸಲಿದ್ದು, ಮೊದಲ ತಂಡವು ನಾಳೆ ಹಾಗೂ ಎರಡನೇ ತಂಡ ಸೆ.27ರಂದು ನಗರಕ್ಕೆ ಬರಲಿದೆ ಎಂದು ಹೇಳಿದರು.

ಮೊದಲ ಹಂತದಲ್ಲಿ ಕೇಂದ್ರ, ಉತ್ತರ, ಪೂರ್ವ, ಪಶ್ಚಿಮ, ನೈರುತ್ಯ ಹಾಗೂ ಬಳ್ಳಾರಿ ವಲಯದಿಂದ 7 ಡಿವೈಎಸ್‍ಪಿಗಳು, 35 ಇನ್ಸ್‍ಪೆಕ್ಟರ್‍ಗಳು ಸೇರಿದಂತೆ 1730 ಸಿಬ್ಬಂದಿಗಳು, 287 ಸಂಚಾರಿ ಪೊಲೀಸರು, 37 ಸಿಎಆರ್‍ಡಿಆರ್ ಸಿಬ್ಬಂದಿ, 7 ಪಿಆರ್ ತುಕ್ಕಡಿ ಹಾಗೂ 14 ಕೆಎಸ್‍ಆರ್‍ಪಿ ತುಕ್ಕಡಿಗಳು ಬರಲಿದ್ದಾರೆ ಎಂದರು. ಎರಡನೇ ಹಂತದಲ್ಲಿ ಇಬ್ಬರು ಎಸ್‍ಪಿ, 8 ಅಡಿಷನಲ್ ಎಸ್‍ಪಿ, 30ಡಿವೈಎಸ್‍ಪಿ, 56 ಇನ್ಸ್‍ಪೆಕ್ಟರ್, 170 ಸಬ್ ಇನ್ಸ್‍ಪೆಕ್ಟರ್‍ಗಳು, 190 ಮಹಿಳಾ ಕಾನ್ಸ್‍ಸ್ಟೇಬಲ್‍ಗಳು ಸೇರಿದಂತೆ 2344 ಸಿಬ್ಬಂದಿಗಳು, 279 ಸಂಚಾರಿ ಪೊಲೀಸರು, 20 ಕೆಎಸ್‍ಆರ್‍ಪಿ ತುಕ್ಕಡಿಗಳು ಬರಲಿದ್ದಾರೆ ಎಂದು ಅವರು ವಿವರಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin