ದ್ವೀಪರಾಷ್ಟ್ರ ಡೊಮಿನಿಕಾಕ್ಕೆ ಅಪ್ಪಳಿಸಿದ ಮರಿಯಾ ಚಂಡಮಾರುತ

ಈ ಸುದ್ದಿಯನ್ನು ಶೇರ್ ಮಾಡಿ

Hurricane-Maria

ಸಾನ್‍ಜ್ಯೂನ್,ಸೆ.19-ಕಳೆದ ವಾರ ಬೀಸಿದ ಡೆಡ್ಲಿ ಇರ್ಮಾ ಚಂಡಮಾರುತಕ್ಕೆ ಅಮೆರಿಕದ ಪ್ಲೊರಿಡಾ ನಲುಗಿ ಹೋಗಿದ್ದ ಬೆನ್ನಲ್ಲೇ ದ್ವೀಪ ರಾಷ್ಟ್ರ ಡೊಮಿನಿಕಾಕ್ಕೆ ಮರಿಯಾ ಚಂಡಮಾರುತ ಅಪ್ಪಳಿಸಿದೆ. ಪೂರ್ವ ಕೆರಿಬಿಯನ್ ಪ್ರದೇಶದಲ್ಲಿ ಚಂಡಮಾರುತ ತೀವ್ರತೆ ಇಂದು ರಾತ್ರಿ ಹೆಚ್ಚಾಗಲಿದ್ದು , ಭಾರೀ ಅನಾಹುತಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.   ಕಳೆದ ವಾರ ಇರ್ಮಾ ಚಂಡ ಮಾರುತ 40ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಇದೀಗ ಅಂತಹುದೇ ಸಂದಿಗ್ಧ ಪರಿಸ್ಥಿತಿ ಎದುರಾಗಲಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಗೊಳ್ಳುವಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.

ಡೊಮಿನಿಕಾದ ಪ್ರಧಾನಿ ರೂಸ್‍ವೆಲ್ಟ್ ಸಕೆರ್ರಿಟ್ ಅವರು ಫೇಸ್‍ಬುಕ್‍ನಲ್ಲಿ ಪ್ರತಿಕ್ರಿಯಿಸಿ, ಭೀಕರ ಚಂಡಮಾರುತ ದೇಶಕ್ಕೆ ಅಪ್ಪಳಿಸಿದೆ. ಗಾಳಿಯ ವೇಗ ಅತ್ಯಂತ ಭಯಂಕರವಾಗಿದೆ. ದೇವರ ದಯೆಯಿಂದ ನಮ್ಮ ಪ್ರಾಣ ಉಳಿಯಬೇಕಿದೆ ಎಂದು ಪೋಸ್ಟ್ ಮಾಡಿದ್ದಾರೆ.  ಡೊಮಿನಿಕ ಅಧಿಕಾರಿಗಳು, ಶಾಲೆ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿ ಜನರು ಅಪಾಯ ಸ್ಥಳದಿಂದ ಬೇರೆಡೆ ಹೋಗುವಂತೆ ಸೂಚನೆ ನೀಡಿದ್ದಾರೆ. 2015ರ ಆಗಸ್ಟ್‍ನಲ್ಲಿ ಭೀಕರ ಎರ್ರಿಕಾ ಚಂಡ ಮಾರುತಕ್ಕೆ ಅನೇಕ ಪ್ರದೇಶಗಳು ಮುಳುಗಿ 31 ಜನರು ಪ್ರಾಣ ಕಳೆದುಕೊಂಡಿದ್ದರು. ಅಲ್ಲದೆ 370ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿದ್ದವು.

Facebook Comments

Sri Raghav

Admin