ಪಾಕ್ ಭಯೋತ್ಪಾದನೆ ತಯಾರಿಕಾ ಘಟಕ : ಭಾರತ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Terrorism--01

ಜಿನಿವಾ, ಸೆ.19-ಭಯೋತ್ಪಾದಕರ ಸ್ವರ್ಗ ಎಂದೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ವಾಗ್ದಾಳಿ ಮುಂದುವರಿಸಿದೆ. ಪಾಕಿಸ್ತಾನವು ತನ್ನ ನೆಲದಲ್ಲಿ ಉಗ್ರರನ್ನು ಮತ್ತು ಉಗ್ರಗಾಮಿ ಸಂಘಟನೆಗಳನ್ನು ಬೆಳೆಸುತ್ತಿದೆ. ಅದು ಭಯೋತ್ಪಾದಕರ ತಯಾರಿಕಾ ಘಟಕವೂ ಆಗಿದೆ ಎಂದು ಭಾರತ ವಾಕ್ ಪ್ರಹಾರ ನಡೆಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ(ಯುಎನ್‍ಎಚ್‍ಆರ್‍ಸಿ) 36ನೇ ಮಾನವ ಹಕ್ಕುಗಳ ಅಧಿವೇಶನದಲ್ಲಿ ಮಾತನಾಡಿದ ಭಾರತೀಯ ವಿದೇಶಾಂಗ ಸೇವೆ (ಐಎಫ್‍ಎಸ್) ಅಧಿಕಾರಿ ಡಾ. ವಿಷ್ಣು ರೆಡ್ಡಿ, ಉಗ್ರರ ತಯಾರಿಕಾ ಕಾರ್ಖಾನೆಗಳನ್ನು ಬಂದ್ ಮಾಡಿ, ಭಯೋತ್ಪಾದಕರನ್ನು ಕಾನೂನಿಗೆ ಒಪ್ಪಿಸಲು ಪಾಕಿಸ್ತಾನ ಪ್ರಮಾಣಿಕ ಪ್ರಯತ್ನಗಳನ್ನು ಮಾಡಬೇಕು ಎಂದು ಸಲಹೆ ಮಾಡಿದರು.

ನೆರೆ ರಾಷ್ಟ್ರವು ಅಂತಾರಾಷ್ಟ್ರೀಯ ಭಯೋತ್ಪಾದನೆಯ ಮುಖವಾಡ ಧರಿಸಿದೆ. ಪಾಕ್ ವಿದೇಶಾಂಗ ಸಚಿವರೇ ಅಂತಾರಾಷ್ಟ್ರೀಯ ನಿಷೇಧಕ್ಕೆ ಒಳಗಾಗಿರುವ ಲಷ್ಕರ್-ಎ-ತೈಬಾ, ಜೈಷ್-ಎ-ಮಹಮದ್ (ಜೆಇಎಂ) ಸೇರಿದಂತೆ ಕೆಲವು ಉಗ್ರಗಾಮಿ ಸಂಘಟನೆಗಳು ನಮ್ಮ ನೆಲದಿಂದಲೇ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಪಾಕಿಸ್ತಾನವು ಉಗ್ರರ ದಮನಕ್ಕೆ ಇಚ್ಚಾಶಕ್ತಿ ತೋರಬೇಕು ಎಂದು ರೆಡ್ಡಿ ಹೇಳಿದರು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಇದನ್ನು ಭಾರತದಿಂದ ಯಾವುದೇ ಕಾರಣಕ್ಕೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Facebook Comments

Sri Raghav

Admin