ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ನವಾಜ್ ಶರೀಫ್ ಗೈರು

ಈ ಸುದ್ದಿಯನ್ನು ಶೇರ್ ಮಾಡಿ

Nawaz

ಇಸ್ಲಮಾಬಾದ್, ಸೆ.19- ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಹಾಜರಾಗಲು ಪಾಕಿಸ್ತಾನದ ಪದಚ್ಯುತಿ ಪ್ರಧಾನಿ ನವಾಜ್ ಶರೀಫ್ ವಿಫಲರಾಗಿದ್ದಾರೆ. ಲಂಡನ್‍ನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಪತ್ನಿ ಕುಲ್ಸುಂ ನವಾಜ್ ಅವರ ಆರೈಕೆ ಹಿನ್ನೆಲೆಯಲ್ಲಿ ಇಂದು ಸುಪ್ರೀಂಕೊರ್ಟ್‍ಗೆ ಗೈರಾಗುತ್ತಿರುವುದಾಗಿ ನವಾಜ್ ಶರೀಫ್ ತಮ್ಮ ರಾಜಕೀಯ ಸಲಹೆಗಾರ ಆಸಿಫ್ ಕಿರ್ಮಾನಿ ಮೂಲಕ ಕಾರಣ ನೀಡಿದ್ದಾರೆ.
ಪನಾಮ ಹಗರಣ ಹಾಗೂ ಭ್ರಷ್ಟಾಚಾರ ಪ್ರಕರಣಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಳೆದ ಜು.28ರಂದು ಸುಪ್ರೀಂಕೋರ್ಟ್ ಶರೀಫ್‍ರನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಿ ಆದೇಶ ಹೊರಡಿಸಿತ್ತು.

ಈ ಹಿನ್ನೆಲೆಯಲ್ಲಿ ಇಂದು ಈ ಪ್ರಕರಣಗಳ ಮೊದಲ ವಿಚಾರಣೆ ನಡೆಯಬೇಕಿತ್ತು. ಆದರೆ, ನವಾಜ್ ಶರೀಫ್‍ರ ಗೈರು ಹಾಜರಿಯಿಂದ ಇಂದು ವಿಚಾರಣೆ ನಡೆಯಲಿಲ್ಲ ಎಂದು ಶರೀಫ್‍ರ ರಾಜಕೀಯ ಸಲಹೆಗಾರ ಆಸಿಫ್ ಕಿರ್ಮಾನಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Facebook Comments

Sri Raghav

Admin