ಸಕಲ ಸರ್ಕಾರಿ ಗೌರವಗಳೊಂದಿಗೆ ಖಮರುಲ್ ಇಸ್ಲಾಂ ಅಂತ್ಯಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

Ismlam--01

ಕಲ್ಬುರ್ಗಿ, ಸೆ.19- ನಿನ್ನೆ ಅಕಾಲಿಕ ಮೃತ್ಯುಗೀಡಾದ ಶಾಸಕ ಖಮರುಲ್ ಇಸ್ಲಾಂ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಕಲ್ಬುರ್ಗಿಯ ಕಲಂದರ್‍ಕಾದಲ್ಲಿ ನಡೆಯಲಿದೆ. ನಿನ್ನೆ ಬೆಂಗಳೂರಿನಲ್ಲಿದ್ದ ಕಮುರುಲ್ಲಾ ಇಸ್ಲಾಂ ಹೃದಯಾಘಾತಕ್ಕೀಡಾಗಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ನಿನ್ನೆ ಹಜ್ ಭವನದಲ್ಲಿ ಸಾರ್ವಜನಿಕ ದರ್ಶನಕ್ಕಿಟ್ಟು ನಂತರ ಕಲ್ಬುರ್ಗಿಗೆ ತೆಗೆದುಕೊಂಡು ಹೋಗಲಾಯಿತು. ಇಂದು ಬೆಳಗ್ಗೆ ಕಲ್ಬುರ್ಗಿಯಲ್ಲಿರುವ ಅವರ ಮನೆ ಮತ್ತು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಅತ್ಯಂತ ಪ್ರಭಾವಿ ಅಲ್ಪ ಸಂಖ್ಯಾತ ನಾಯಕರಾಗಿದ್ದ ಖಮರುಲ್ ಇಸ್ಲಾಂ  ಅವರ ದರ್ಶನಕ್ಕೆ ಜನ ಸಾಗರವೇ ಹರಿದು ಬಂತು. ಹೈದರಾಬಾದ್, ಮಹಾರಾಷ್ಟ್ರ ರಾಜ್ಯಗಳಿಂದಲೂ ಅಭಿಮಾನಿಗಳು ಬೆಂಬಲಿಗರ ಬಂದು ಅಂತಿಮ ದರ್ಶನ ಪಡೆದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಧ್ಯಕ್ಷರಾದ ದಿನೇಶ್ ಗುಂಡುರಾವ್, ಎಸ್.ಆರ್.ಪಾಟೀಲ್, ಸಚಿವರಾದ ಮತ್ತಿತರ ನಾಯಕರು ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಸಚಿವರಾದ ಶರಣ ಪ್ರಕಾಶ್, ಪ್ರಿಯಾಂಕ್ ಖರ್ಗೆ ಮತ್ತಿತರರು ಅಂತಿಮ ದರ್ಶನದ ಎಲ್ಲಾ ಸಿದ್ಧತೆಗಳ ನೇತೃತ್ವ ವಹಿಸಿದ್ದರು. ಸಂಜೆ ಕಲ್ಬುರ್ಗಿಯ ಕಲಂದರ್‍ಕಾದಲ್ಲಿ ಇಸ್ಲಾಂ ಧಾರ್ಮಿಕ ವಿಧಾನಗಳಂತೆ ಅಂತ್ಯಕ್ರಿಯೆ ನಡೆಯಲಿದೆ.

ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಮುಸ್ಲಿಂ ಸಮುದಾಯದಿಂದ ಆಯ್ಕೆಯಾಗಿದ್ದ ಏಕೈಕ ಶಾಸಕರಾಗಿದ್ದ ಕಮರುಲ್ಲಾ ಇಸ್ಲಾಂ ಕಾಂಗ್ರೆಸ್‍ನಲ್ಲಿ ಪ್ರಭಾವಿ ನಾಯಕರಾಗಿದ್ದರು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಮೂರುವರೆ ವರ್ಷ ಸಚಿವರಾಗಿ ಕೆಲಸ ಮಾಡಿದ್ದ ಅವರು ಸಂಪುಟ ಪುನರ್ರಚನೆಯ ವೇಳೆ ಅಧಿಕಾರ ಕಳೆದುಕೊಂಡಿದ್ದರು.

ಆ ಸಂದರ್ಭದಲ್ಲಿ ಖಮರುಲ್ಲಾ ಅವರ ಪ್ರಭಾವವನ್ನು ಸೆಳೆಯಲು ಅನೇಕ ಪಕ್ಷಗಳು ಪ್ರಯತ್ನಿಸಿದ್ದವು. ಇದನ್ನರಿತ ಕಾಂಗ್ರೆಸ್ ಹೈ ಕಮಾಂಡ್ ಎಐಸಿಸಿ ಕಾರ್ಯದರ್ಶಿಯನ್ನಾಗಿ ನೇಮಿಸಿ, ಕೇರಳ ಕಾಂಗ್ರೆಸ್‍ನ ಉಸ್ತುವಾರಿಯ ಜವಾಬ್ದಾರಿ ನೀಡಿತ್ತು. ಹೊಸ ಸ್ಥಾನ ಮಾನದಿಂದ ಸಂತೃಪ್ತಗೊಂಡಿದ್ದ ಖಮರುಲ್ಲಾ ಅವರು ಉತ್ಸಾಹದಿಂದಲೇ ಕೆಲಸ ಆರಂಭಿಸಿದ್ದರು.

Facebook Comments

Sri Raghav

Admin