ಸಮುದ್ರದಲ್ಲಿ ಅಪಾಯದಲ್ಲಿದ್ದ 18 ಪಕ್ಷಿ ವಿಜ್ಞಾನಿಗಳ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Coast-gaurd-d

ಪುದುಚೇರಿ, ಸೆ.19-ಪುದುಚೇರಿ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ನೌಕೆ ಕೆಟ್ಟು ನಿಂತು ಅಪಾಯದಲ್ಲಿದ್ದ 18 ಮಂದಿ ಪಕ್ಷಿ ವಿಜ್ಞಾನಿಗಳು ಮತ್ತು ಮೂವರು ಸಿಬ್ಬಂದಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆಯವರು ರಕ್ಷಿಸಿದ್ದಾರೆ ಎಂದು ಪಾಂಡಿಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ತಿಳಿಸಿದ್ದಾರೆ. ಪುದುಚೇರಿ, ಚೆನ್ನೈ ಮತ್ತು ಮುಂಬೈನ 18 ಪಕ್ಷಿ ವಿಜ್ಞಾನಿಗಳು ಮತ್ತು ಮೂವರು ಸಿಬ್ಬಂದಿ ಭಾನುವಾರ ಇಲ್ಲಿನ ಬಂದರಿನಿಂದ ಯಾಂತ್ರೀಕೃತ ದೋಣಿಯಲ್ಲಿ ಸಮುದ್ರಕ್ಕೆ ತೆರಳಿದ್ದರು. ನೌಕೆಯು 15 ನಾಟಿಕಲ್ ಮೈಲಿಗಳಷ್ಟು ದೂರ ಕ್ರಮಿಸಿದ ನಂತರ ತಾಂತ್ರಿಕ ದೋಷ ಕಂಡು ಬಂದು ಮಧ್ಯದಲ್ಲೆ ನಿಂತಿತ್ತು.

ಪ್ರತಿಕೂಲ ಹವಾಮಾನದಿಂದಾಗಿ ತೊಂದರೆಗೆ ಸಿಲುಕಿದ್ದ ಇವರು ತಮ್ಮ ಬಂಧು-ಮಿತ್ರರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಪೊಲೀಸರ ಮೂಲಕ ಕರಾವಳಿ ರಕ್ಷಣಾ ಪಡೆಗೆ ವಿಚಾರ ತಿಳಿದು ಇವರನ್ನು ರಕ್ಷಿಸಿದರು ಎಂದು ಮುಖ್ಯಮಂತ್ರಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments

Sri Raghav

Admin