ಅಕ್ರಮವಾಗಿ ರಕ್ತಚಂದನ ಸಾಗಿಸುತ್ತಿದ್ದ ಪದವೀಧರ ಸೇರಿ ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Tumakuru-Crime--01

ತುಮಕೂರು, ಸೆ.20-ಕಾರಿನಲ್ಲಿ ಅಕ್ರಮವಾಗಿ ರಕ್ತಚಂದನ ಸಾಗಿಸುತ್ತಿದ್ದ ನಾಲ್ಕು ಮಂದಿ ಗಂಧ ಚೋರರನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿ ಒಂದು ಲಕ್ಷ ಮೌಲ್ಯದ ರಕ್ತಚಂದನ ಹಾಗೂ 6 ಲಕ್ಷ ಬೆಲೆಯ ಟಯೋಟಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಆಂಧ್ರಪ್ರದೇಶ ಶೇಖ್ ಷಾವಲೀ (28), ನಾಗಿರೆಡ್ಡಿ (21), ಕಾರ್‍ಕಲ್ ಅಮೀರ್ ಭಾಷಾ(24), ಚರಣ್‍ಕುಮಾರ್ (24) ಬಂಧಿತ ಆರೋಪಿಗಳು. ಆರೋಪಿಗಳ ಪೈಕಿ ಚರಣ್‍ಕುಮಾರ್ ಪದವೀಧರನಾಗಿದ್ದು, ಇವರೊಂದಿಗೆ ಸೇರಿ ಕಾರಿನಲ್ಲಿ ರಕ್ತಚಂದನವನ್ನು ಆಂಧ್ರಪ್ರದೇಶದಿಂದ ಬೆಂಗಳೂರು ಕಡೆಗೆ ಸಾಗಿಸುತ್ತಿದ್ದನು. ಈ ಬಗ್ಗೆ ಮಾಹಿತಿ ಪಡೆದ ಕ್ಯಾತಸಂದ್ರ ಠಾಣೆ ಪೊಲೀಸರು ಮಂಚಕಲ್‍ಕುಪ್ಪೆ, ತುಮಕೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಿಬ್ಬಂದಿಗಳು ನಾಕಾಬಂಧಿ ಹಾಕಿ ಗಸ್ತು ಮಾಡುತ್ತಿದ್ದರು.

ಆನಂದ್ ಬಿಹಾರಿ ಹೊಟೇಲ್ ಎದುರು ಅನುಮಾನಾಸ್ಪದವಾಗಿ ಬಂದು ನಿಂತ ಟಯೋಟಾ ಕಾರನ್ನು ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ ರಕ್ತಚಂದನವಿದ್ದುದು ಕಂಡುಬಂದ ಹಿನ್ನೆಲೆಯಲ್ಲಿ ಆರೋಪಿಗಳ ಸಮೇತ ಕಾರು ಹಾಗೂ ಮಾಲನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸಿಪಿಐ ರಾಮಕೃಷ್ಣಯ್ಯ, ಡಿವೈಎಸ್ಪಿ ಧರ್ಮೇಂದ್ರ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ಶೋಭಾರಾಣಿ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ದಿವ್ಯಾಗೋಪಿನಾಥ್ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Facebook Comments

Sri Raghav

Admin