ಎಂಎಸ್‍ಎಸ್ ಮರಿಮೊಮ್ಮಕ್ಕಳ ಗಾನಸುಧೆಗೆ ತಲೆದೂಗಿದ ನಮೋ

ಈ ಸುದ್ದಿಯನ್ನು ಶೇರ್ ಮಾಡಿ

Namo

ನವದೆಹಲಿ, ಸೆ.20-ತಾಯಿಯಂತೆ ಮಗಳು, ನೂಲಿನಂತೆ ಸೀರೆ ಎಂಬ ಗಾದೆ ಮಾತು ಅಕ್ಷರಶಃ ಸಾಬೀತುಮಾಡುವಂಥ ಸ್ಮರಣೀಯ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸ ಸಾಕ್ಷಿಯಾಯಿತು. ಜಗತ್ಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆ ಎಂಎಸ್ ಸುಬ್ಬುಲಕ್ಷ್ಮಿ ಅವರ ಮರಿಮೊಮ್ಮಕ್ಕಳು ನಡೆಸಿಕೊಟ್ಟ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಪ್ರಧಾನಮಂತ್ರಿ ತಲೆದೂಗಿ ತಾಳ ಹಾಕಿದರು.

ಎಂಎಸ್‍ಎಸ್ ಎಂದೇ ಜನಪ್ರಿಯರಾದ ಸುಬ್ಬುಲಕ್ಷ್ಮಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ದೆಹಲಿಯಲ್ಲಿ ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಕಲಾವಿದರಾದ ಐಶ್ವರ್ಯ ಮತ್ತು ಸೌಂದರ್ಯ ತಮ್ಮ ಮತ್ತಜ್ಜಿಯನ್ನು ನೆನೆಪಿಸುವಂಥ ಗಾನಸುಧೆ ಹರಿಸಿದರು.

DKF28hYUIAAFLjP

ತಮ್ಮ ನಿರಂತರ ಕಾರ್ಯಚಟುವಟಿಕೆಗಳ ನಡುವೆಯೂ ಪ್ರಧಾನಿ ಕೆಲಕಾಲ ಸಂಗೀತ ಲೋಕದಲ್ಲಿ ಮೈಮರೆತರು. ಮರಿಮೊಮ್ಮಕ್ಕಳ ಕಲಾ ಪ್ರೌಢಿಮೆಯನ್ನು ಮೋದಿ ಮುಕ್ತಕಂಠದಿಂದ ಪ್ರಶಂಸಿಸಿದರು.  ಎಂಎಸ್ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಕೇಂದ್ರ ಸರ್ಕಾರ 100 ರೂ. ಮತ್ತು 10 ರೂ.ಗಳ ವಿಶೇಷ ನಾಣ್ಯಗಳನ್ನು ನಿನ್ನೆ ಬಿಡುಗಡೆ ಮಾಡಿದೆ.

nlIweoDU16fRpdFp

DKGTJOaVYAAxrd2

DKFDypWVAAAKpXc

Facebook Comments

Sri Raghav

Admin