ಬದುಕಿರುವಾಗಲೆ ವೈಕುಂಠ ಸಮಾರಾಧನೆ ಮಾಡಿಕೊಂಡ ವೃದ್ಧ..!

ಈ ಸುದ್ದಿಯನ್ನು ಶೇರ್ ಮಾಡಿ

fasdfgsadgsdg

ಚಿಂತಾಮಣಿ, ಸೆ.20- ಪುತ್ರ ಮಾಡಿದ ಮೋಸದಿಂದ ಮನನೊಂದ ವೃದ್ಧನೊಬ್ಬ ಬದುಕಿರುವಾಲ್ಲೇ ಊರಿಗೆಲ್ಲಾ ಊಟ ಹಾಕಿ ತನ್ನ ತಿಥಿಯನ್ನು ತಾನೇ ಮಾಡಿಕೊಂಡ ಪ್ರಸಂಗ ನಡೆದಿದೆ. ನಗರದ ಬುಕ್ಕನಹಳ್ಳಿ ರಸ್ತೆಯ ವಾಯುಪುತ್ರ ನಗರದಲ್ಲಿ ವಾಸವಿರುವ ಮಾರಪ್ಪ ರೆಡ್ಡಿ ಎಂಬ ವಯೋವೃದ್ದರು ಜೀವಂತವಾಗಿ ಇರುವಾಗಲೇ ತಮ್ಮ ಉತ್ತರ ಕ್ರಿಯಾಧಿಗಳನ್ನು ತಾವೇ ವೈಕುಂಠ ಸಮಾರಾಧನೆ ಮೂಲಕ ನೆರವೇರಿಸಿಕೊಂಡು ಮಿತ್ರ ವೃಂದಕ್ಕೆ ಸಾಂಪ್ರದಾಯಿಕವಾಗಿ ಊಟದ ವ್ಯವಸ್ಥೆಯನ್ನೂ ಸಹ ಕೈಗೊಂಡಿದ್ದರು. ತನ್ನ ಮಗನಿಗೆ ತನ್ನ ಬಳಿ ಇದ್ದ ಎಲ್ಲಾ ಆಸ್ತಿ ಪಾಸ್ತಿ ಹಣ ನೀಡಿ ಮೋಸ ಹೋದ ವೃದ್ದ ನೊಬ್ಬನು ತಾನು ಬದುಕಿರುವಾಗಲ್ಲೆ ಕರ ಪತ್ರಗಳನ್ನು ಅಂಚಿ ತನ್ನ ವೈಕುಂಠ ಸಮಾರಾಧನೆಯನ್ನು ಮಾಡಿಕೊಂಡಿದ್ದಾರೆ.

ಬದುಕಿರುವಾಗಲ್ಲೆ ವೈಕುಠ ಸಮಾರಾಧನೆ ಮಾಡಿಕೊಳ್ಳುತ್ತಿರುವ ವ್ಯಕ್ತಿಯನ್ನು ವಾಯು ಪುತ್ರ ನಗರದಲ್ಲಿ ವಾಸವಿರುವ ಮಾರಪ್ಪರೆಡ್ಡಿ ಎಂಬ ವಯೋವೃ ದ್ದರು ಜೀವಂತವಾಗಿ ಇರುವಾ ಗಲೇ ಉತ್ತರ ಕ್ರಿಯಾಧಿಗಳನ್ನು ನೆರವೇರಿಸಿಕೊಳ್ಳಲು ಚಂದಾ ಮೂಲಕ ಹಣ ಸಂಗ್ರಹಿಸಿ, ವೈಕುಂಠ ಸಮಾರಾಧನೆ ಹಮ್ಮಿಕೊ ಳ್ಳುವ ಮೂಲಕ ಗಮನ ಸೆಳೆದುಕೊಂಡಿದ್ದಾರೆ.  ವೈಕುಂಠ ಸಮಾರಾಧನೆಯ ಆಹ್ವಾನ ಪತ್ರಿಕೆಯ ಜೊತೆಗೆ ಆ ವೃದ್ದರ ಮಗ ಮತ್ತು ಮಗನ ಸ್ನೇಹಿತ ತನಗೆ ಮಾಡಿರುವ ಮೋಸ, ದ್ರೋಹ, ಮಾನಸಿಕ ದೈಹಿಕ ಕಿರುಕುಳ, ತನಗೆ ಧನಸಹಾಯ ಮಾಡಿರುವವರ ಹಾಗೂ ಮೋಸ ಮಾಡಿರುವವರ ಹೆಸರುಗಳೇ ಸಮೇತ ವಿವರ, ತನ್ನ ಆಸ್ತಿಪಾಸ್ತಿಗಳ ವಿವರ, ತನ್ನ ಮೊಬೈಲ್ ನಂ.7353917494 ಇತ್ಯಾದಿಗಳೆಲ್ಲವನ್ಣೂ ಒಳ ಗೊಂಡ ಭಿತ್ತಿಪತ್ರವನ್ನೂ ಸಹಾ ನಗರ ಸೇರಿದಂತೆ ಸುತ್ತಮುತ್ತಲೆಲ್ಲೆಡೆ ಸ್ವತಃ ಹಂಚುವ ಮೂಲಕ ವೈಶಿಷ್ಟ್ಯವಾಗಿ ಕಾಣಸಿಕ್ಕಿದ್ದಾರೆ.

ತನ್ನ ಶ್ವಾಸ ನಿಂತ ನಂತರ ತನ್ನ ದೇಹವನ್ನು ಆಸ್ಪತ್ರೆಗೆ ದಾನವಾಗಿ ನೀಡಿದ್ದೇನೆಂದು ಘೋಷಿಸುವ ಮೂಲಕ ಅವರಿಗಿರುವ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸಿದ್ದು, ಹಿರಿಯರ ನಾಣ್ಣುಡಿಯಂತೆ ಮಕ್ಕಳಿಗೆ ವಿದ್ಯೆ, ಬುದ್ದಿಯೊಂದಿಗೆ ಆಸ್ತಿಪಾಸ್ತಿಯನ್ನು ಸಂಪಾದಿಸಿ ನೀಡಬೇಕು, ಅದೇ ಜೀವನದ ಧರ್ಮಬೆಂಬ ಸಂದೇಶಕ್ಕೆ ತನ್ನ ಮಗ ತದ್ವಿರುದ್ದವಾಗಿ ಜನ್ಮ ನೀಡಿದ ತಂದೆಯಾದ ನನ್ನ ವಿರುದ್ದವೇ ಸಮರ ಸಾರಿದ್ದಾನೆಂಬ ಭಿತ್ತಿಪತ್ರದಲ್ಲಿನ ವೃದ್ದರ ನೋವಿನ ಮಾತು ನಿಜಕ್ಕೂ ಪ್ರಜ್ಞಾವಂತ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಸಮಾಜದಲ್ಲಿ ಇನ್ನಾ ದರೂ ಇಂತಹ ಘಟನೆಗಳು ಮರುಕಳಿಸದಿದ್ದಹಾಗೆ ನೋಡಿಕೊಳ್ಳುವ ಜವಾಬ್ದಾರಿ ಪ್ರಜ್ಞಾವಂತ ಸಾರ್ವಜನಿಕರು ಮೇಲಿದೆ.

Facebook Comments

Sri Raghav

Admin