ಭಾರತ-ಪಾಕ್ ವೈರತ್ವ ಕೊನೆಯಾಗಲಿ : ಮೆಹಬೂಬಾ ಮುಫ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Mehbooba-Mufti

ಶ್ರೀನಗರ, ಸೆ.20-ಗಡಿ ಭಾಗದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭುಗಿಲೆದ್ದಿರುವ ವೈರತ್ವದಿಂದಾಗಿ ರಾಜ್ಯದ ಜನರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ. ಉಭಯ ದೇಶಗಳ ಹಗೆತನದ ಭಾವನೆ ಶೀಘ್ರ ಕೊನೆಯಾಗಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ತಾಂಗ್ದರ್ ವಿಭಾಗದಲ್ಲಿ ನಿನ್ನೆ ಸಂಜೆ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಏಷ್ಯಾದ ಎರಡು ಪ್ರಮುಖ ದೇಶಗಳ ಮಧ್ಯೆ ಶಾಂತಿ ನೆಲೆಸಿದರೆ ಈ ಪ್ರದೇಶದ ಅಭಿವೃದ್ದಿಗೆ ಪೂರಕವಾಗುತ್ತದೆ. ಈ 70 ವರ್ಷಗಳ ವೈರತ್ವದಿಂದ ಜನರಿಗೆ ಏನಾದರೂ ಪ್ರಾಪ್ತಿಯಾಗಿದೆಯೇ ಎಂಬುದನ್ನು ಯೋಚಿಸಬೇಕಾಗಿದೆ ಎಂದು ಮೆಹಬೂಬಾ ಹೇಳಿದರು.

Facebook Comments

Sri Raghav

Admin