ಮಹಾಮಳೆಗೆ ಚಿಕ್ಕೋಡಿ ಸೇತುವೆಗಳು ಜಲಾವೃತ

ಈ ಸುದ್ದಿಯನ್ನು ಶೇರ್ ಮಾಡಿ

Rain--01

ಬೆಳಗಾವಿ,ಸೆ.20-ಮಹಾಮಳೆಗೆ ಚಿಕ್ಕೋಡಿಯ ಸೇತುವೆಗಳು ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ. ಮಹಾರಾಷ್ಟ್ರದಲ್ಲಿ ಮುಂದುವರಿದ ವರುಣನ ಆರ್ಭಟದಿಂದಾಗಿ ಕೃಷ್ಣ , ದೂಗ್ ನದಿಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಪ್ರವಾಹ ಉಂಟಾಗಿದ್ದು , ಜನರು ಆತಂಕದಲ್ಲಿ ಮುಳುಗಿದ್ದಾರೆ.  ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ-ಯಡೂರು ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿದ್ದು ಕುಸಿಯುವ ಭೀತಿ ಎದುರಾಗಿದೆ. ಸುತ್ತಲ ಗ್ರಾಮಗಳ ಸಂಪರ್ಕ ಮಾರ್ಗವಾಗಿದ್ದ ಸೇತುವೆಗಳು ಜಲಾವೃತಗೊಂಡಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Facebook Comments

Sri Raghav

Admin