ಮೈಂತ್ರಾ ಸಿಇಒ ಮನೆಯಲ್ಲಿ ಕೋಟಿ ರೂ.ವಜ್ರ ಕದ್ದವರ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

myntra-ceo-web

ಬೆಂಗಳೂರು,ಸೆ.20- ಆನ್‍ಲೈನ್ ಶಾಪಿಂಗ್‍ಗೆ ಹೆಸರುವಾಸಿಯಾದ ಮೈಂತ್ರಾ ಕಂಪನಿ ಸಿಇಒ ಮನೆಯಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳು ಕಳ್ಳತನವಾಗಿದ್ದು, ಈ ಸಂಬಂಧ ಕಬ್ಬನ್‍ಪಾರ್ಕ್ ಠಾಣೆ ಪೊಲೀಸರು ಕೆಲವರನ್ನು ವಿಚಾರಣೆಗೆ ಒಳಪಡಿಸಿ, ಮನೆ ಕೆಲಸದವರನ್ನು ವಶಕ್ಕೆ ಪಡೆದಿದ್ದಾರೆ.

Theft-Thief-01
ವಿಠಲ್‍ಮಲ್ಯ ರಸ್ತೆಯಲ್ಲಿ ವಾಸವಾಗಿರುವ ಅನಂತ್ ನಾರಾಯಣ್ ಎಂಬುವರು ಕಂಪನಿಯೊಂದರ ಸಿಇಒ ಆಗಿದ್ದು, ಕಾರ್ಯ ನಿಮಿತ್ತ ವಿದೇಶಕ್ಕೆ ಹೋಗಿದ್ದಾಗ ಮನೆಯಲ್ಲಿ ಕಳ್ಳತನ ನಡೆದಿದೆ. ವಿದೇಶದಿಂದ ಬಂದಾಗ ಆಭರಣಗಳು ನಾಪತ್ತೆಯಾದ ಬಗ್ಗೆ ನಾರಾಯಣ್ ಅವರು ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ದೂರು ನೀಡಿ, ಏಳು ವಜ್ರದ ನೆಕ್ಲೆಸ್‍ಗಳು, 24 ಜೊತೆ ಚಿನ್ನದ ಓಲೆಗಳು, 4 ವಜ್ರದ ಬ್ರಾಸ್‍ಲೈಟ್‍ಗಳು ಸೇರಿದಂತೆ ಸುಮಾರು ಒಂದು ಕೋಟಿಗೂ ಹೆಚ್ಚು ರೂ. ಕಳ್ಳತನವಾಗಿರುವ ಬಗ್ಗೆ ತಿಳಿಸಿದ್ದರು. ಆ.30ರಂದು ಈ ಆಭರಣಗಳನ್ನು ನೋಡಿದ್ದು, ತದನಂತರ ತಾವು ವಿದೇಶಕ್ಕೆ ಹೋಗಿದ್ದಾಗ ಕಳ್ಳತನವಾಗಿದೆ ಎಂದು ದೂರು ನೀಡಿದ್ದರಿಂದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಮನೆ ಕೆಲಸದ ಮಹಿಳೆ ಮತ್ತು ಕಾರು ಚಾಲಕ ಇಬ್ಬರು ಸೇರಿ ಈ ಕೃತ್ಯ ನಡೆಸಿರುವ ಶಂಕೆಯಿದೆ. ವಿಚಾರಣೆಯ ವೇಳೆ ಮನೆ ಕೆಲಸದ ಮಹಿಳೆ ಸತ್ಯ ಬಾಯಿ ಬಿಟ್ಟಿದ್ದಾಳೆ ಎನ್ನಲಾಗಿದೆ. ಕಾರು ಚಾಲಕ ಪರಾರಿಯಾಗಿದ್ದು ಆತನಿಗಾಗಿ ತಮಿಳುನಾಡು ಮತ್ತಿತರ ಕಡೆಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

Facebook Comments