ವಿಧಾನಸೌಧ ಆವರಣದಲ್ಲಿ ಹಾವು ಪ್ರತ್ಯಕ್ಷ..! (Video)

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha--01

ಬೆಂಗಳೂರು,ಸೆ.20-ವಿಧಾನಸೌಧ ಆವರಣದಲ್ಲಿ ಹಾವೊಂದು ಕಾಣಿಸಿಕೊಂಡು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಿಧಾನಸೌಧ ಹೊರಭಾಗದ ಹುಲ್ಲು ಹಾಸಿನಲ್ಲಿ ಧ್ವನಿವರ್ಧಕದ ಪೆಟ್ಟಿಗೆಯಲ್ಲಿ ಮೈನಾ ಹಕ್ಕಿ ಗೂಡು ಕಟ್ಟಿ ಮೊಟ್ಟಿ ಇಟ್ಟಿತ್ತು. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಪೆಟ್ಟಿಗೆಯೊಳಗೆ ಇದ್ದ ಹಾವು ಮೈನಾ ಹಕ್ಕಿಯ ಮೊಟ್ಟೆಗಳನ್ನು ತಿಂದು ಹಾಕಿದೆ. ನಂತರ ನಿರ್ಭಯವಾಗಿ ಪೆಟ್ಟಿಗೆಯಲ್ಲಿ ವಿರಮಿಸಿತ್ತು.  ಇದನ್ನು ಕಂಡ ಜನರು ಪೆಟ್ಟಿಗೆ ಬಳಿ ಜಮಾಯಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾವು ಹಿಡಿಯುವವರಿಗೆ ದೂರವಾಣಿ ಕರೆ ಮಾಡಿ ಅವರನ್ನು ಕರೆಸುವ ಪ್ರಯತ್ನ ಮಾಡಿದರು. ಅಷ್ಟರಲ್ಲಿ ಸಾರ್ವಜನಿಕರೊಬ್ಬರು ಕಟ್ಟಿಗೆಯಿಂದ ಧ್ವನಿವರ್ಧಕ ಪೆಟ್ಟಿಗೆಯನ್ನು ಬಡಿದರು. ಇದರಿಂದ ಗಾಬರಿಗೊಂಡ ಹಾವು ಪೆಟ್ಟಿಗೆಯಿಂದ ಜಾರಿ ಕ್ಷಣಾರ್ಧದಲ್ಲಿ ಮಾಯವಾಯಿತು.

Facebook Comments

Sri Raghav

Admin