ಶಾಕಿಂಗ್ : ಕಾಮುಕ ಬಾಬಾನ ಡೇರಾ ಸಚ್ಚಾ ಸೌಧದಲ್ಲಿ 600 ಅಸ್ಥಿಪಂಜರಗಳು ಪತ್ತೆ ..!

ಈ ಸುದ್ದಿಯನ್ನು ಶೇರ್ ಮಾಡಿ

Derasa-ccha--01

ಸಿರ್ಸಾ, ಸೆ.20-ಎರಡು ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಸ್ವಯಂ-ಘೋಷಿತ ದೇವಮಾನವ ಬಾಬಾ ಗುರ್ಮೀತ್ ರಾಮ್ ರಹೀಂ ಒಡೆತನದ ಹರಿಯಾಣದ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌಧದಲ್ಲಿ (ಡಿಎಸ್‍ಎಸ್) ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ.
ಡಿಎಸ್‍ಎಸ್ ಆವರಣದಲ್ಲಿ ಅನೇಕ ಎಲುಬಿನಗೂಡಿನ ಆವಶೇಷಗಳನ್ನು ಅಧಿಕಾರಿಗಳು ಪರಿಶೀಲನೆ ವೇಳೆ ಪತ್ತೆ ಮಾಡಿದ್ದಾರೆ. ಒಂದು ಮೂಲದ ಪ್ರಕಾರ ಆಶ್ರಮದಲ್ಲಿ ದೊರೆತ ಅಸ್ಥಿಪಂಜರಗಳ ಸಂಖ್ಯೆ ಸುಮಾರು 600. ಇದರಿಂದಾಗಿ ಡೇರಾ ಸೌಧದಲ್ಲಿ ನರಮೇಧ ನಡೆದ ಬಗ್ಗೆ ಅನುಮಾನಗಳಿಗೆ ಪುಷ್ಟಿ ದೊರೆತಿದೆ.
ಅಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಶೋಧ ಆರಂಭಿಸಿದ ಮೊದಲ ದಿನವೇ ಕೆಲವು ಆಸ್ತಿಪಂಜರಗಳು ಪತ್ತೆಯಾಗಿದ್ದವು.

ಸೌಧದ ಭಕ್ತೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಅಥವಾ ಬಾಬಾ ವಿರೋಧಿಗಳನ್ನು ರಹಸ್ಯ ಕೋಣೆಗಳಲ್ಲಿ ಕೊಂದು ಹಾಕಿ ಆವರಣದಲ್ಲಿ ಹೂಳಗಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆಸ್ಥಿಪಂಜರಗಳು ಪತ್ತೆಯಾಗಿರುವುದು ಅನೇಕ ಸಂಗತಿಗಳನ್ನು ಸಾಬೀತು ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ಮತ್ತಷ್ಟು ತೀವ್ರಗೊಂಡಿದೆ.

ನೇಪಾಳದಲ್ಲಿ ಹನಿಗಾಗಿ ತೀವ್ರ ಶೋಧ :

ಈ ಮಧ್ಯೆ, ಬಾಬಾನ ದತ್ತುಪುತ್ರಿ ಎಂದೇ ಗುರುತಿಸಿಕೊಂಡಿರುವ ಹನಿಪ್ರೀತ್ ಸಿಂಗ್ ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಇರುವುದು ಖಚಿತವಾಗುತ್ತಿದ್ದಂತೆ ವಿಶೇಷ ತಂಡದ ಅಧಿಕಾರಿಗಳು ರಾಜಧಾನಿ ಕಠ್ಮಂಡು ಸೇರಿದಂತೆ ಅನೇಕ ನಗರಗಳಲ್ಲಿ ಆಕೆಗಾಗಿ ಜಾಲಾಡುತ್ತಿದ್ದಾರೆ.  ಹನಿ ಬಂಧನವಾದರೆ ಡಿಎಸ್‍ಎಸ್‍ನ ಮತ್ತಷ್ಟು ಕರ್ಮಕಾಂಡಗಳು ಬೆಳಕಿಗೆ ಬರಲಿದೆ.

Facebook Comments

Sri Raghav

Admin