ಅ.1ರಿಂದ ಶಿರಡಿ ವಿಮಾನ ನಿಲ್ದಾಣ ಕಾರ್ಯಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

Shiradi--01

ಶಿರಡಿ, ಸೆ.21-ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳುವ ಭಕ್ತರಿಗೆ ಸಿಹಿ ಸುದ್ದಿ. ಅಕ್ಟೋಬರ್ 1ರಿಂದ ಶಿರಡಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ಟ್ರೂ ಜೆಟ್ ಸೇರಿದಂತೆ ವಿವಿಧ ಕಂಪನಿಗಳು ಶಿರಡಿಗೆ ವಿಮಾನ ಸಂಪರ್ಕ ಕಲ್ಪಿಸಲು ಸಿದ್ಧವಾಗಿದ್ದು , ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಕ್ಟೋಬರ್ 1ರಂದು ಶಿರಡಿ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ.  ಪ್ರತಿದಿನ 500 ಪ್ರಯಾಣಿಕರ ಆಗಮನ, ನಿರ್ಗಮನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ವಿಮಾನ ನಿಲ್ದಾಣದ ವಿಸ್ತರಣೆ ಕಾರ್ಯವೂ ನಡೆಯುತ್ತಿದೆ. ಮುಂಬೈ, ದೆಹಲಿ, ಹೈದರಾಬಾದ್ ನಗರಗಳಿಗೆ ವಿಮಾನ ಹಾರಾಟ ಆರಂಭವಾಗಲಿದೆ.

ಅಲೆಯನ್ಸ್ ಏರ್ ಮುಂಬೈ ಮತ್ತು ದೆಹಲಿಗೆ ವಿಮಾನ ಸಂಪರ್ಕ ಕಲ್ಪಿಸಲಿದೆ. ಟ್ರೂ ಜೆಟ್ ಹೈದರಾಬಾದ್‍ಗೆ ಹಾರಾಟ ನಡೆಸಲಿದೆ. ಇಂಡಿಗೋ ಸಹ ವಿಮಾನಯಾನ ಸೇವೆ ಆರಂಭಿಸಲು ಅರ್ಜಿ ಸಲ್ಲಿಸಿದೆ. ಶಿರಡಿ ವಿಮಾನ ನಿಲ್ದಾಣ 3,200 ಕಿ.ಮೀ ರನ್ ವೇ ಹೊಂದಿದೆ. ವಿಮಾನ ನಿಲ್ದಾಣದ ರನ್‍ವೇ ವಿಸ್ತರಣಾ ಕಾರ್ಯವೂ ನಡೆಯುತ್ತಿದೆ. ರಾತ್ರಿ ವಿಮಾನಗಳ ಹಾರಾಟಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಕೆಲವು ತಿಂಗಳುಗಳಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಶಿರಡಿ ಸಾಯಿಬಾಬಾ ದೇವಾಲಯ ವಿಮಾನ ನಿಲ್ದಾಣದಿಂದ 14 ಕಿ.ಮೀ.ದೂರದಲ್ಲಿದೆ. ಪ್ರಯಾಣಿಕರು ವಿಮಾನ ನಿಲ್ದಾಣದಿಂದ ದೇವಾಲಯಕ್ಕೆ ತೆರಳಲು ಬಸ್ ವ್ಯವಸ್ಥೆ ಮಾಡಲು ಮಹಾರಾಷ್ಟ್ರ ಸರ್ಕಾರ ಸಿದ್ಧತೆ ನಡೆಸಿದೆ. ಟ್ಯಾಕ್ಸಿ ಸೇವೆಲೂ ಲಭ್ಯವಾಗಲಿದೆ.

Facebook Comments

Sri Raghav

Admin