ಎಸ್.ಎಂ.ಕೃಷ್ಣರ ಅಳಿಯ ಸಿದ್ದಾರ್ಥ ನಿವಾಸ – ಕಚೇರಿಗಳ ಮೇಲೆ ಐಟಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

SSiddarth--01

ಬೆಂಗಳೂರು,ಸೆ.21- ವಿದೇಶಾಂಗ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಅಳಿಯ ಸಿದ್ದಾರ್ಥ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಸಿದ್ದಾರ್ಥ ಅವರ ಒಡೆತನದ ಕಾಫಿ ಡೇ, ವೇ2 ವೆಲ್ತ್ , ಸೆರಾಯ್ ಗ್ರೂಪ್ ಆಫ್ ಹೋಟೆಲ್ ಸೇರಿದಂತೆ ಹಲವು ಕೇಂದ್ರ ಕಚೇರಿಗಳು ಹಾಗೂ ಯುಬಿಸಿಟಿ ಬಳಿ ಇರುವ ಕಾಫಿ ಡೇ ಮುಖ್ಯ ಕಚೇರಿ, ಬೆಂಗಳೂರಿನ ಸದಾಶಿವನಗರದಲ್ಲಿರುವ ಸಿದ್ದಾರ್ಥ ಅವರ ನಿವಾಸ ಸೇರಿದಂತೆ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದು , ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರಿನ ಹಲವೆಡೆ ಇರುವ ಕಾಫಿ ಡೇ, ರಾಜರಾಜೇಶ್ವರಿನಗರ, ಹೆಬ್ಬಾಳ, ಚಿಕ್ಕಮಗಳೂರು, ಗೋವಾ, ಮಡಿಕೇರಿ ಸೇರಿದಂತೆ ಎಲ್ಲಾ ಎಸ್ಟೇಟ್‍ಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ರಸ್ತೆಯಲ್ಲಿರುವ ಎಬಿಸಿ ಕಂಪನಿಗೆ ಸೇರಿದ ಕಾಫಿ ಡೇ, ರೆಸಾರ್ಟ್‍ಗಳ ಮೇಲೂ ಐಟಿ ದಾಳಿ ನಡೆದಿದೆ.

ಸುಮಾರು 8 ಇನೋವಾ ಕಾರುಗಳಲ್ಲಿ ಬಂದ ಐಟಿ ಅಧಿಕಾರಿಗಳ ತಂಡ ರಾಜ್ಯದ ವಿವಿಧೆಡೆ ಇರುವ ಸಿದ್ದಾರ್ಥ ಅವರ ಒಡೆತನದ ಕಂಪನಿಗಳು, ಕಚೇರಿಗಳು, ಎಸ್ಟೇಟ್‍ಗಳು ಹಾಗೂ ಮತ್ತಿತರ ಕಡೆ ದಾಳಿ ನಡೆಸಿ ಲೆಕ್ಕಪತ್ರಗಳ ವಿವರ ಕಲೆ ಹಾಕುತ್ತಿದ್ದಾರೆ.  ಇತ್ತೀಚೆಗೆ ಅಷ್ಟೇ ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆದ ಐಟಿ ದಾಳಿ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲೇ ಬಿಜೆಪಿಗೆ ಇತ್ತೀಚೆಗೆ ಸೇರಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥರವರ ಕಚೇರಿ, ನಿವಾಸಗಳ ಮೇಲೂ ಐಟಿ ದಾಳಿ ನಡೆದಿದೆ.

Facebook Comments

Sri Raghav

Admin