ನಮ್ಮ ಬಳಿಯೂ ಅಣ್ವಸ್ತ್ರಗಳಿವೆ : ಭಾರತಕ್ಕೆ ಧಮ್ಕಿ ಹಾಕಿದ ಪಾಕ್ ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

Pakistsn--01

ನ್ಯೂಯಾರ್ಕ್, ಸೆ.21-ನಮ್ಮ ಬಳಿಯೂ ಆಣ್ವಸ್ತ್ರಗಳಿದ್ದು, ಭಾರತದ ಸೇನೆ ವಿರುದ್ಧ ಅದನ್ನು ಬಳಸುತ್ತೇವೆ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಶಾಹೀದ್ ಖಾಖನ್ ಅಬ್ಬಾಸಿ ಬೆದರಿಕೆ ಹಾಕಿದ್ದಾರೆ. ಈಗಾಗಲೇ ಅಣ್ವಸ್ತ್ರ ಪರೀಕ್ಷೆಗಳ ಮೂಲಕ ಇಡೀ ವಿಶ್ವದ ಕೆಂಗೆಣ್ಣಿಗೆ ಉತ್ತರ ಕೊರಿಯಾ ಗುರಿಯಾಗಿರುವಾಗಲೇ, ಪಾಕಿಸ್ತಾನ ಪ್ರಧಾನಿ ನೀಡಿರುವ ಈ ಹೇಳಿಕೆ ಭಾರತ ಮತ್ತು ಅದರ ಮಿತ್ರ ರಾಷ್ಟ್ರಗಳನ್ನು ಕೆರಳಿಸಿದೆ.  ಅಮೆರಿಕದ ಅತ್ಯುನ್ನತ ಚಿಂತಕರ ವೇದಿಕೆಯಾದ ಕೌನ್ಸಿಲ್ ಆಫ್ ಫಾರಿನ್ ರಿಲೇಷನ್ಸ್ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾವು ಲಘು-ಶ್ರೇಣಿಯ ಅಣ್ವಸ್ಥ್ರಗಳನ್ನು ಅಭಿವೃದ್ದಿಗೊಳಿಸಿದ್ದೇವೆ. ಅದು ಭಾರತ ಸೇನೆ ಅಭಿವೃದ್ದಿಗೊಳಿಸಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಮರ್ಥವಾಗಿ ಎದುರಿಸಬಲ್ಲದು ಎಂದು ಅಬ್ಬಾಸಿ ಹೇಳಿದ್ದಾರೆ.

ಪಾಕಿಸ್ತಾನದಲ್ಲಿರುವ ವಿನಾಶಕಾರಿ ಪರಮಾಣು ಶಸ್ತ್ರಾಸ್ತ್ರಗಳು ಅತ್ಯಂತ ಸುರಕ್ಷಿತ ಮತ್ತು ಸುಭದ್ರವಾಗಿದೆ ಎಂದು ಪಾಕ್ ಪ್ರಧಾನಿ ತಿಳಿಸಿದ್ದಾರೆ. ಇದೇ ವೇಳೆ ಕಾಶ್ಮೀರ ವಿವಾದ ಕುರಿತು ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ ಸ್ವಯಂ ನಿರ್ಣಯ ಹಕ್ಕಿಗಾಗಿ ಪಾಕಿಸ್ತಾನವು ಬೆಂಬಲ ನೀಡುವುದನ್ನು ಮುಂದುವರಿಸಲಿದೆ. ಕಾಶ್ಮೀರ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯವನ್ನು ಅಂಗೀಕರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

 

 

Facebook Comments

Sri Raghav

Admin