ಫೋರ್ಬ್ಸ್ ವಿಶ್ವದ 10 ಶ್ರೇಷ್ಠ ಉದ್ಯಮಿಗಳ ಪಟ್ಟಿಯಲ್ಲಿ ಮೂವರು ಭಾರತೀಯರು

ಈ ಸುದ್ದಿಯನ್ನು ಶೇರ್ ಮಾಡಿ

Businet--01

ನ್ಯೂಯಾರ್ಕ್, ಸೆ.21-ವಿಶ್ವದಲ್ಲಿರುವ 100 ಶ್ರೇಷ್ಠ ಉದ್ಯಮಿಗಳ ಫೋರ್ಬ್ಸ್ ನ ವಿಶೇಷ ಪಟ್ಟಿಯಲ್ಲಿ ಮೂವರು ಭಾರತೀಯ ವಾಣಿಜ್ಯ ದಿಗ್ಗಜರಾದ ಲಕ್ಷ್ಮೀ ಮಿತ್ತಲ್, ರತನ್ ಟಾಟಾ ಮತ್ತು ವಿನೋದ್ ಖೋಸ್ಲಾ ಸ್ಥಾನ ಪಡೆದಿದ್ದಾರೆ. ಏರ್‍ಸಲರ್ಸ್ ಮಿತ್ತಲ್ ಕಂಪನಿಯ ಅಧ್ಯಕ್ಷ ಹಾಗೂ ಸಿಒಇ ಲಕ್ಷ್ಮೀ ಮಿತ್ತಲ್, ರತನ್ ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಹಾಗೂ ಸನ್ ಮೈಕ್ರೋಸಿಸ್ಟಮ್ಸ್ ಸಹ ಸಂಸ್ಥಾಪಕ ವಿನೋದ್ ಖೋಸ್ಲಾ ಫೋರ್ಬ್ಸ್ ಪಟ್ಟಿಯಲ್ಲಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇದ್ದಾರೆ. ಅವರನ್ನು ಟ್ರಂಪ್ ಆರ್ಗನೈಸೇಷನ್ ಮಾಲೀಕರು ಮತ್ತು ಅಮೆರಿಕದ 45ನೇ ಅಧ್ಯಕ್ಷರು ಎಂದು ಪಟ್ಟಿಯಲ್ಲಿ ಬಣ್ಣಿಸಲಾಗಿದೆ.  mಅಮೆಝಾನ್ ಸಂಸ್ಥಾಪಕ ಜೆಫ್ ಬೆಝಾಸ್, ವರ್ಜಿನ್ ಗ್ರೂಪ್ ಸ್ಥಾಪಕ ರಿಚರ್ಡ್ ಬ್ರಾನ್ಸನ್, ಬರ್ಕ್‍ಶೈರ್ ಹ್ಯಾಥ್‍ವೆ ಸಿಒಇ ವಾರೆನ್ ಬಫೆಟ್, ಮೈಕೋಸಾಪ್ಟ್ ಸಹ ಸಂಸ್ಥಾಪಕ ಬಿಲ್‍ಗೇಟ್ಸ್ ಹಾಗೂ ನ್ಯೂಸ್ ಕಾರ್ಪ್ ಕಾರ್ಯಕಾರಿ ಅಧ್ಯಕ್ಷ ರೂಪರ್ಟ್ ಮರ್ಡೋಕ್ ಹೆಸರುಗಳೂ ಸಹ ಪಟ್ಟಿಯಲ್ಲಿದೆ.

Facebook Comments

Sri Raghav

Admin