ಅಕ್ಕ ಸಂಘಟನೆ ಅಧ್ಯಕ್ಷರಾಗಿ ಶಿವಮೂರ್ತಿ ಕೀಲಾರ ಆಯ್ಕೆ

Akka--01

ಬೆಂಗಳೂರು, ಸೆ.22- ಅಮೆರಿಕಾದ ಕನ್ನಡ ಕೂಟಗಳ ಒಕ್ಕೂಟ(ಅಕ್ಕ) ಕಾರ್ಯ ನಿರ್ವಾಹಕ ಸಮಿತಿಗೆ ಹೊಸ ನಿರ್ದೇಶಕರನ್ನು ಆಯ್ಕೆ ಮಾಡಿದ್ದು, ಅಧ್ಯಕ್ಷರಾಗಿ ಶಿವಮೂರ್ತಿ ಕೀಲಾರ ಆಯ್ಕೆಯಾಗಿದ್ದಾರೆ. 2017-18ರ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ಧನಂಜಯ ಕೆಂಗಯ್ಯ, ರಮೇಶ್ ಅಪ್ಪಾರೆಡ್ಡಿ, ಡಾ.ಶಶಿಧರ್ ನೇಮಕಾಗಿದ್ದಾರೆ. ಕಾರ್ಯದರ್ಶಿಯಾಗಿ ಡಾ.ನವೀನ್ ಕೃಷ್ಣ, ಖಜಾಂಚಿಯಾಗಿ ತುಮಕೂರು ದಯಾನಂದ, ಜಂಟಿ ಕಾರ್ಯದರ್ಶಿಯಾಗಿ ರೇಣುಕಾ ಪ್ರಸಾದ್, ರೂಪಶ್ರೀ ಮೇಲುಕೋಟೆ, ಜಂಟಿ ಖಜಾಂಚಿಯಾಗಿ ಡಾ.ಲತಾ ನಾಗರಾಜ್, ಸುರೇಶ್ ಕೃಷ್ಣಯ್ಯ ಆಯ್ಕೆಯಾಗಿದ್ದಾರೆ.

Facebook Comments

Sri Raghav

Admin