‘ಕಾಂಗ್ರೆಸ್ ನಲ್ಲಿ ಪ್ರಾಮಾಣಿಕವಾಗಿ ದುಡಿಯುವವರಿಗೆ ಬೆಲೆ ಇಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

Rajanna--01

ಮಧುಗಿರಿ, ಸೆ.22-ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕುರಿತು ಶಾಸಕ ಕೆ.ಎನ್.ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಪ್ರಾಮಾಣಿಕವಾಗಿ ಹಾಗೂ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುವವರಿಗೆ ಸರಿಯಾದ ಬೆಲೆ ನೀಡುವುದಿಲ್ಲವೆಂಬ ಶಾಸಕ ಕೆ.ಎನ್ ರಾಜಣ್ಣನವರ ಮಾತಿನ ಮರ್ಮ ನಿಗೂಢವಾಗಿದ್ದು, ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲೇ ಕಾಂಗ್ರೆಸ್ ಪಕ್ಷದ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಹಿಡಿತ ಹೊಂದಿರುವ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರು ಎಂದರೆ ತಪ್ಪಾಗಬಹುದು.

ಆದರೆ ಕೆ.ಎನ್.ರಾಜಣ್ಣ ನೀಡಿರುವ ಹೇಳಿಕೆಯಿಂದ ಅವರ ಬೆಂಬಲಿಗರಲ್ಲಿ ವಿದ್ಯುತ್ ಸಂಚಾರವಾದಂತಿದೆ. ಈ ಹೇಳಿಕೆಯ ದೃಷ್ಠಿ ಜಯಚಂದ್ರರಿಗೋ ಅಥವಾ ಕೆಪಿಸಿಸಿ ಅಧ್ಯಕ್ಷರಿಗೋ ತಿಳಿಯದಾಗಿದ್ದು, ಮುಖ್ಯಮಂತ್ರಿಗಳ ಕೆಲವೇ ಆಪ್ತರಲ್ಲಿ ಒಬ್ಬರೆನಿಸಿಕೊಂಡ ರಾಜಣ್ಣನವರಿಗೆ ಇಲ್ಲಿಯವರೆಗೂ ಎಲ್ಲಾ ಅರ್ಹತೆ ಇದ್ದರೂ ಸಂಪುಟದಲ್ಲಿ ಒಳನುಸಳಲು ಹಾಗೂ ತಮ್ಮ ಪುತ್ರ ರಾಜೇಂದ್ರನ ವಿಧಾನಪರಿಷತ್ ಚುನಾವಣೆಯಲ್ಲಿ ಉಂಟಾದ ಸೋಲಿಗೆ ಇವರೇ ಕಾರಣವೆಂಬುದು ಶಾಸಕರಿಗೆ ಸ್ಪಷ್ಟವಾಗಿ ಅರಿವಾಗಿದ್ದು, ತಮ್ಮ ಮುಂದಿನ ರಾಜಕೀಯ ನಡೆಗೆ ಯಾವ ಪಕ್ಷ ಸೂಕ್ತ ಯೋಚನೆಯಲ್ಲಿದ್ದಾರೆ ಎಂದು ಸ್ಪಷ್ಟವಾಗಿದೆ.

ಕಳೆದ ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷದಿಂದ ಪ್ರಥಮ ಬಾರಿಗೆ ಬೆಳ್ಳಾವಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಇವರು, ಮತ್ತೇ ಸಿದ್ದರಾಮಯ್ಯನವರೊಂದಿಗೆ ಕಾಂಗ್ರೆಸ್ ಪಕ್ಷ ಸೇರಿ ಮಧುಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಇಂದು ಕಾಂಗ್ರೇಸ್ ಪಕ್ಷವನ್ನೇ ಟೀಕಿಸುತ್ತಿರುವುದು ಅವರು ಮುಂದೆ ಜೆ.ಡಿ.ಎಸ್ ಪಕ್ಷ ಸೇರುವ ವದಂತಿಗಳು ತಾಲೂಕಿನಾದ್ಯಂತ ದಟ್ಟವಾಗಿ ಹಬ್ಬಿದೆ. ಇನ್ನು ಚುನಾವಣೆಗೆ ಕೆಲವು ತಿಂಗಳುಗಳೇ ಉಳಿದಿರುವ ಈ ಸಮಯದಲ್ಲಿ ಕೆ.ಎನ್.ಆರ್ ರವರ ಮುಂದಿನ ಹಾದಿ ಜೆಡಿಎಸ್ ಅಥವಾ ಬಿಜೆಪಿ ಪಕ್ಷದವರ ಪಾಲಾಗಲಿದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin