ಜೆಡಿಯು ರಾಷ್ಟ್ರೀಯ ಹಂಗಾಮಿ ಅಧ್ಯಕ್ಷರಾಗಿ ಚೋಟೂಬಾಯಿ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

JDU--01

ಬೆಂಗಳೂರು, ಸೆ.22- ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಜೆಡಿಯು ಕಾರ್ಯಕಾರಿಣಿ ಸಭೆಯಲ್ಲಿ ಚೋಟೂ ಬಾಯಿ ವಾಸವ ಅವರನ್ನು ಪಕ್ಷದ ನೂತನ ರಾಷ್ಟ್ರೀಯ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮಲ್ಲನಗೌಡ ನಾಡಗೌಡ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರ ನವೆಂಬರ್‍ನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿತೀಶ್‍ಕುಮಾರ್ ಬಿಜೆಪಿ ವಿರುದ್ಧ ಪಕ್ಷ ಸಂಘಟಿಸಲು ಅಧಿಕಾರ ನೀಡಲಾಗಿತ್ತು. ಆದರೆ, ನಿತೀಶ್‍ಕುಮಾರ್ ಅವರು ಕಾನೂನು ಉಲ್ಲಂಘಿಸಿ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದರು.

ಇದು ಪಕ್ಷದ ನೀತಿ ನಿಯಮಗಳ ಉಲ್ಲಂಘನೆ ಮತ್ತು ಕಾನೂನು ಬಾಹಿರವಾಗಿದದು, ಇದನ್ನು ಖಂಡಿಸಿ ಪಕ್ಷದ ರಾಷ್ಟೀಯ ಚುನಾವಣಾಧಿಕಾರಿ ಅನಿಲ್ ಹೆಗ್ಗಡೆ ಅವರು ನಡೆಸಿದ ಚುನಾವಣೆ ಕೂಡ ಕಾನೂನುಬಾರಹಿವಾಗಿರುತ್ತದೆ. ಆದ್ದರಿಂದ ಈ ಎಲ್ಲಾ ವಿಷಯಗಳನ್ನು ಕೂಲಂಕಷವಾಗಿ ಪರಿಗಣಿಸಿ ಚೋಟೂಬಾಯಿ ಅವರನ್ನು ಪಕ್ಷದ ರಾಷ್ಟ್ರೀಯ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin