ತಿಥಿ ಸಾಮ್ರಾಣಿ ಹೊಗೆ ತಂದ ಆಪತ್ತು : ಹೆಜ್ಜೇನು ದಾಳಿಗೆ ಒಬ್ಬ ಸಾವು, ಹಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Bee

ಕುಣಿಗಲ್,ಸೆ.22- ವೈಕುಂಠ ಸಮಾರಾಧನೆ ವೇಳೆ ಹಚ್ಚಿದ ಸಾಮ್ರಾಣಿ ಹೊಗೆಯಿಂದ ಹೆಜ್ಜೇನು ದಾಳಿ ನಡೆಸಿದ್ದು ಒಬ್ಬ ಮೃತಪಟ್ಟು , 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.  ಹುಲಿಯೂರು ದುರ್ಗ, ಕೆಂಕೆರೆ ಗ್ರಾಮದ ನಿವಾಸಿ ಕೃಷ್ಣ(35) ಮೃತಪಟ್ಟ ದುರ್ದೈವಿ.   ಕೃಷ್ಣ ಅವರ ಸಂಬಂಧಿ ಚಿಕ್ಕ ಹೊನ್ನಯ್ಯನವರ 11ನೇ ದಿನದ ವೈಕುಂಠ ಸಮಾರಾಧನೆ ಕಾರ್ಯಕ್ರಮ ನಿನ್ನೆ ಊರ ಹೊರವಲಯದ ಜಮೀನಿನೊಂದರಲ್ಲಿ ನಡೆದಿತ್ತು. ಈ ವೇಳೆ ಗ್ರಾಮಸ್ಥರು, ಕುಟುಂಬಸ್ಥರು ಭಾಗವಹಿಸಿದರು. ವಿಧಿವಿಧಾನದಂತೆ ಪೂಜೆ ನಡೆಸುವ ವೇಳೆ ಸಾಮ್ರಾಣಿಯನ್ನು ಬೆಂಕಿಗೆ ಹಾಕಿದ್ದಾರೆ.

ಈ ವೇಳೆ ಪಕ್ಕದಲ್ಲೇ ಇದ್ದ ಹಾಲದ ಮರದಲ್ಲಿ ಹೆಜ್ಜೇನು ಗೂಡಿಗೆ ಹೊಗೆ ತಾಗಿ ಹೆಜ್ಜೇನುಗಳು ದಾಳಿ ನಡೆಸಿವೆ. ಈ ವೇಳೆ ನಟರಾಜು, ಕರಿಯಪ್ಪ , ಕೃಷ್ಣ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  ತೀವ್ರವಾಗಿ ಗಾಯಗೊಂಡ ಕೃಷ್ಣ ಅವರನ್ನು ಹುಲಿಯೂರು ದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.   ಈ ಸಂಬಂಧ ಹುಲಿಯೂರು ದುರ್ಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin