ಮೋದಿ ಅವರ ‘ಸ್ವಚ್ಛತಾ ಹಿ ಸೇವಾ’ ಅಭಿಯಾನಕ್ಕೆ ಸೂಪರ್ ಸ್ಟಾರ್ ಸಪೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Modi

ಚೆನ್ನೈ, ಸೆ.22-ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಭಾರತೀಯ ಚಿತ್ರರಂಗದ ಜನಪ್ರಿಯ ತಾರೆಯರು ಬೆಂಬಲ ವ್ಯಕ್ತಪಡಿಸುತ್ತಿದ್ದು, ಸೂಪರ್‍ಸ್ಟಾರ್ ರಜನಿಕಾಂತ್ ಕೂಡ ಸಾಥ್ ನೀಡಿದ್ದಾರೆ. ಸ್ವಚ್ಛತೆಯೇ ದೇವರು ಎಂದು ಟ್ವೀಟರ್‍ನಲ್ಲಿ ಬಣ್ಣಿಸಿರುವ 66 ವರ್ಷದ ತಲೈವಾ, ಸ್ವಚ್ಛ ಭಾರತ್ ಅಭಿಯಾನದ ಅಡಿ ಕೈಗೊಂಡಿರುವ ಈ ಯೋಜನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ನಾನು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಸ್ವಚ್ಛತಾ ಹಿ ಸೇವಾ ಆಂದೋಲನಕ್ಕೆ ನನ್ನ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ರಜನಿ ಟ್ವೀಟಿಸಿದ್ದಾರೆ.

ಮಲೆಯಾಳಂ ಚಿತ್ರರಂಗದ ಸೂಪರ್‍ಸ್ಟಾರ್ ಮೋಹನ್ ಲಾಲ್ ಕಳೆದ ಮೂರು ದಿನಗಳ ಹಿಂದಷ್ಟೇ ಈ ಅಭಿಯಾನಕ್ಕೆ ಸಹಕಾರ ನೀಡುವುದಾಗಿ ಪ್ರಕಟಿಸಿದ್ದರು.

Facebook Comments

Sri Raghav

Admin