ರಾಷ್ಟ್ರಪತಿಗಳಿಂದ ಸಂವಿಧಾನ ಶಿಲ್ಪಿಗೆ ನಮನ

ಈ ಸುದ್ದಿಯನ್ನು ಶೇರ್ ಮಾಡಿ

Ambedker--01

ನಾಗ್ಪುರ,ಸೆ.22-ರಾಮನಾಥ್ ಕೋವಿಂದ್ ರಾಷ್ಟ್ರಪತಿಯಾದ ಮೇಲೆ ಇದೇ ಮೊದಲ ಬಾರಿಗೆ ನಗರದ ದೀಕ್ಷಾ ಭೂಮಿಗೆ ತೆರಳಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಇಂದು ನಾಗ್ಪುರ ವಿಮಾನ ನಿಲ್ದಾಣಕ್ಕೆ ರಾಷ್ಟ್ರಪತಿ ಬರುತ್ತಿದ್ದಂತೆ ಮಹಾರಾಷ್ಟ್ರ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ರಾಮದಾಸ್ ಅತಾವಳೆ ಆತ್ಮೀಯವಾಗಿ ಬರಮಾಡಿಕೊಂಡರು.

ಡಾ.ಅಂಬೇಡ್ಕರ್ ಅವರ ಸಮಾಧಿ ಸ್ಥಳ ದೀಕ್ಷಾ ಭೂಮಿಗೆ ತೆರಳಿದ ನಂತರ ರಾಮ್‍ತೆಕ್‍ನಲ್ಲಿರುವ ಶಾಂತಿನಾಥ್ ಜೈನ ದೇವಾಲಯಕ್ಕೆ ಭೇಟಿ ನೀಡಿದರು. ಬಳಿಕ ಕಾಮ್ಟೆಯ ಡ್ರಾಗನ್ ಪ್ಯಾಲೇಸ್ ಬಳಿ ಇರುವ ಅಂತಾರಾಷ್ಟ್ರೀಯ ಧ್ಯಾನ ಕೇಂದ್ರವನ್ನು ಉದ್ಘಾಟಿಸಿ ಬುದ್ಧ ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Facebook Comments

Sri Raghav

Admin