ಸಬ್ಸಿಡಿಯಲ್ಲಿ ಸಿಗಲಿವೆ ಅತ್ಯಾಧುನಿಕ ಸೌಲಭ್ಯವುಳ್ಳ ಮನೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Home--01

ಕೆಂಗೇರಿ, ಸೆ.22-ಗುಣಮಟ್ಟದ ಕಾಮಗಾರಿ ಮಾಡಿ ಅತ್ಯಾಧುನಿಕ ಸೌಲಭ್ಯವುಳ್ಳ ಮನೆಗಳನ್ನು ಕರ್ನಾಟಕ ಗೃಹ ಮಂಡಳಿ ವತಿಯಿಂದ ಕೆಂಗೇರಿ, ಸೂರ್ಯನಗರ, ಬಂಡೆಮಠದಲ್ಲಿ ನಿರ್ಮಿಸಲಾಗಿದ್ದು, ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ ಎಂದು ವಸತಿ ಸಚಿವ ಎಂ.ಕೃಷ್ಣಪ್ಪ ತಿಳಿಸಿದರು. ಕೆಂಗೇರಿ ಉಪನಗರದಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಬಹುಮಹಡಿ ಸಮುಚ್ಚಯದಲ್ಲಿಂದು ಹಮ್ಮಿಕೊಂಡಿದ್ದ ಪ್ರಾಪರ್ಟಿ ಎಕ್ಸ್ ಪೋಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮನೆಗಳನ್ನು ನೀಡಲಾಗುತ್ತದೆ ಹಾಗೂ ರಾಜ್ಯಸರ್ಕಾರವು ಎಸ್ಸಿ-ಎಸ್ಟಿ ಜನರಿಗೂ ಸಬ್ಸಿಡಿ ದರದಲ್ಲಿ ಫ್ಲ್ಯಾಟ್ ಹಂಚಿಕೆ ಮಾಡಲಿದೆ ಎಂದು ಹೇಳಿದರು.

ಸ್ಥಳದಲ್ಲೇ ಒಂದು ಲಕ್ಷ ರೂ. ಪಾವತಿಸಿದರೆ ತಕ್ಷಣವೇ ಮನೆಯ ಹಂಚಿಕೆ ಪತ್ರ ನೀಡಲಾಗುತ್ತದೆ. ಎಸ್‍ಬಿಐ, ಎಚ್‍ಡಿಎಫ್‍ಸಿ, ಐಸಿಐಸಿಐ ಬ್ಯಾಂಕ್ ಸೇರಿದಂತೆ 8 ಬ್ಯಾಂಕ್‍ಗಳು ಎಕ್ಸ್‍ಪೆÇೀನಲ್ಲಿ ಭಾಗವಹಿಸಿದ್ದು, ಈ ಬ್ಯಾಂಕ್‍ನವರಿಗೆ ಕರ್ನಾಟಕ ಗೃಹ ಮಂಡಳಿ ಶ್ಯೂರಿಟಿ ನೀಡಲಿದೆ ಎಂದು ಹೇಳಿದರು.
ಸರ್ಕಾರ ಗುಣಮಟ್ಟದ ಮನೆಗಳನ್ನು ನಿರ್ಮಿಸಿದೆ. ಕೆಎಚ್‍ಬಿ ನಿರ್ಮಿಸಿರುವ ಮನೆಗಳಾದ್ದರಿಂದ ಕಾನೂನು ತೊಡಕುಗಳು ಬರುವುದಿಲ್ಲ. ಹಾಗಾಗಿ ಜನ ಮನೆಗಳನ್ನು ಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು. ಸುಮಾರು ಒಂದೂವರೆ ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ಶೇ.30ರಷ್ಟು ಮನೆಗಳು ಮಾರಾಟ ಆಗಿವೆ. ಉಳಿದ ಮನೆಗಳನ್ನೂ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ ಎಂದು ಕೃಷ್ಣಪ್ಪ ತಿಳಿಸಿದರು.

ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ನಿವಾಸಿಗಳ ಬೇಡಿಕೆಯನ್ನು ಕೂಡಲೇ ಈಡೇರಿಸುತ್ತೇವೆ. ಕಾವೇರಿ ಕುಡಿಯುವ ನೀರು ಸರಬರಾಜು ಮಾಡಲು ಬಿಡಬ್ಲ್ಯುಎಸ್‍ಎಸ್‍ಬಿಗೆ 4 ಕೋಟಿ ರೂ. ಪಾವತಿಸಲಾಗಿದೆ. ಹೊಸದಾಗಿ ನಿರ್ಮಿಸಿರುವ ಈ ಫ್ಲ್ಯಾಟ್‍ಗಳಿಗೆ ಎಲ್ಲ ಮೂಲಭೂತ ಸೌಕರ್ಯ ಕೊಡಲಾಗುತ್ತದೆ ಎಂದು ಭರವಸೆ ನೀಡಿದರು. ಕಳೆದ ಅವಧಿಯಲ್ಲಿ ಮನೆ ಖರೀದಿಸಿದಾಗ ಸ್ಕ್ವೇರ್‍ಫೀಟ್‍ಗೆ 3650 ರೂ. ಇತ್ತು. ಈ ಮನೆಗಳವರು ತಮಗೂ ರಿಯಾಯ್ತಿ ನೀಡಬೇಕೆಂದು ಬೇಡಿಕೆ ಇಟ್ಟಿರುವುದರಿಂದ ಇದನ್ನು ಮಂಡಳಿ ಸಭೆಯಲ್ಲಿ ಚರ್ಚಿಸಿ 3300ರೂ.ಗೆ ನಿಗದಿಪಡಿಸಲು ನಿರ್ಧರಿಸಲಾಗುತ್ತದೆ ಎಂದು ಹೇಳಿದರು. ಎಕ್ಸ್ ಪೋನಲ್ಲಿ ಮನೆ ಖರೀದಿ ಮಾಡುವವರಿಗೆ ಶೇ.2ರಷ್ಟು ರಿಯಾಯಿತಿ ಜತೆಗೆ ಸ್ಕ್ವೇರ್‍ಫೀಟ್‍ಗೆ 3300ರೂ.ಗೆ ಕೊಡಲಾಗುತ್ತದೆ ಎಂದರು.

ಈ ವೇಳೆ ಆಯುಕ್ತರಾದ ಇಬ್ರಾಹಿಂ, ಶಾಸಕ ಎಸ್.ಟಿ.ಸೋಮಶೇಖರ್, ಪಾಲಿಕೆ ಸದಸ್ಯೆ ಶಾರದಾ ಮುನಿರಾಜು ಮತ್ತಿತರರಿದ್ದರು.
ಎಕ್ಸ್ ಪೋಗೆ ನೂರಾರು ಜನ ಆಗಮಿಸಿ ಮನೆಗಳನ್ನು ಕೊಳ್ಳಲು ಉತ್ಸುಕರಾಗಿದ್ದುದು ಕಂಡುಬಂತು.

Facebook Comments

Sri Raghav

Admin