ಸುಕ್ರಿ ಬೊಮ್ಮಗೌಡ, ಡಾ.ಮಾಲತಿಹೊಳ್ಳ ಸೇರಿ ಐವರು ಗಣ್ಯರಿಗೆ ಚುಂಚಶ್ರೀ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Sukri-Bommagouda

ಆದಿಚುಂಚನಗಿರಿ, ಸೆ.22- ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಸುಕ್ರಿಬೊಮ್ಮಗೌಡ, ಡಾ.ಮಾಲತಿಹೊಳ್ಳ ಸೇರಿದಂತೆ ಐವರು ಗಣ್ಯರು ಆದಿಚುಂಚನಗಿರಿ ಮಠದ ಪ್ರತಿಷ್ಠಿತ ಚುಂಚಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಕ್ರೀಡಾ ಸೇವೆಯಲ್ಲಿ ಬೆಂಗಳೂರಿನ ಪದ್ಮಶ್ರೀ ಡಾ.ಮಾಲತಿಹೊಳ್ಳ, ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲ್ಲಿಕ್, ಜಾನಪದ ಕಲಾವಿದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಪದ್ಮಶ್ರೀ ಪುರಸ್ಕøತೆ ಸುಕ್ರಿಬೊಮ್ಮಗೌಡ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತುಮಕೂರಿನ ಡಾ.ಡಿ.ಕೆ.ರಾಜೇಂದ್ರ, ಸಂಸ್ಕøತ ಮತ್ತು ಸಾಹಿತ್ಯ ಕ್ಷೇತ್ರದಿಂದ ಬೆಂಗಳೂರಿನ ಪೆಪ್ರೊ.ಶಿವರಾಮ್ ಅಗ್ನಿಹೋತ್ರಿ ಚುಂಚಶ್ರೀ ಪ್ರಶಸ್ತಿಗೆ ಭಾಜನರಾದ ಮಹನೀಯರು.

ಪ್ರಶಸ್ತಿ ತಲಾ 50ಸಾವಿರ ನಗದು, ಫಲಕಗಳನ್ನು ಒಳಗೊಂಡಿದೆ. ಇದೇ ಭಾನುವಾರ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪುಣ್ಯಭೂಮಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಶ್ರೀಗಳು ಪ್ರಶಸ್ತಿ ಪ್ರದಾನ ಮಾಡುವರು.  ಶ್ರೀ ಕ್ಷೇತ್ರದಲ್ಲಿ ನಾಳೆಯಿಂದ 25ರವರೆಗೂ 39ನೇ ರಾಜ್ಯಮಟ್ಟದ ಕಾಲಭೈರವೇಶ್ವರಸ್ವಾಮಿಯ ಜಾನಪದ ಕಲಾಮೇಳ ನಡೆಯಲಿದೆ. ಭಾನುವಾರ ನಡೆಯಲಿರುವ ಸಮಾರಂಭದಲ್ಲಿ ಐವರು ಮಹನೀಯರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಲೋಕಸಭಾ ಸದಸ್ಯ ಕೆ.ಎಚ್.ಮುನಿಯಪ್ಪ, ಶಾಸಕ ಚೆಲುವರಾಯಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಮತ್ತಿತರರು ಉಪಸ್ಥಿತರಿರುವರು.

Facebook Comments

Sri Raghav

Admin