ಉತ್ತರ ಕೊರಿಯಾವನ್ನು ಹಿಂದೆಯೇ ಮಟ್ಟ ಹಾಕಬೇಕಿತ್ತು

ಈ ಸುದ್ದಿಯನ್ನು ಶೇರ್ ಮಾಡಿ

Trump--01
ಅಲಬಾಮಾ, ಸೆ.23- ಉತ್ತರ ಕೊರಿಯಾದ ರಾಕೆಟ್ ಮ್ಯಾನ್‍ಗಳನ್ನು ಬಹಳ ಹಿಂದೆಯೇ ಮಟ್ಟ ಹಾಕಬೇಕಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.  ಅಮೆರಿಕದ ಅಲಬಾಮಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಮತ್ತು ಆತನ ತಂದೆ ಕಿಮ್ ಜಾಂಗ್ ಇಲ್ ವಿರುದ್ಧ ಕಿಡಿಕಾರಿದ್ದು, ಈ ಇಬ್ಬರು ರಾಕೆಟ್ ಮ್ಯಾನ್‍ಗಳನ್ನು ಬಹಳ ಹಿಂದೆಯೇ ಪಾಠ ಕಲಿಸಬೇಕಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಬಿಲ್ ಕ್ಲಿಂಟನ್ ಸೇರಿದಂತೆ ಅಮೆರಿಕದ ಮಾಜಿ ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್, ಅಮೆರಿಕ ಈ ರಾಕೆಟ್‍ಮ್ಯಾನ್‍ಗಳನ್ನು ಬಹಳ ಹಿಂದೆಯೇ ಕಟ್ಟಿ ಹಾಕಿದ್ದರೆ ಅವರು ಇಂದು ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆಗಳು ಜಾಗತಿಕ ಭದ್ರತೆ ದೊಡ್ಡ ಅಪಾಯ ತಂದೊಡ್ಡಿದೆ. ಇದು ನಿಜಕ್ಕೂ ಸ್ವೀಕಾರಾರ್ಹವಲ್ಲ. ಈ ಹಿಂದಿನ ಸರ್ಕಾರಗಳು ಮಾಡಿದ ನಿರ್ಲಕ್ಷ್ಯವನ್ನು ತಾವು ಮಾಡುವಂತಿಲ್ಲ ಎಂದು ಹೇಳುವ ಮೂಲಕ ಟ್ರಂಪ್ ಉತ್ತರ ಕೊರಿಯಾ ವಿರುದ್ಧ ತಾವು ಸಮರ ಸಾರಲು ಸಿದ್ಧ ಎಂದು ಹೇಳಿದ್ದಾರೆ.

Facebook Comments