ಕಾಶ್ಮೀರ ಕಣಿವೆಯಲ್ಲಿ 4.5 ತೀವ್ರತೆಯ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

Jammu-Lashmire-01

ಶ್ರೀನಗರ, ಸೆ.23-ಕಾಶ್ಮೀರ ಕಣಿವೆಯಲ್ಲಿ ಇಂದು ಮುಂಜಾನೆ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.5ರಷ್ಟು ದಾಖಲಾಗಿದೆ. ಭೂಕಂಪವು ಸಾಧಾರಣ ತೀವ್ರತೆ ಹೊಂದಿದ್ದು, ಯಾವುದೇ ಹಾನಿ ಬಗ್ಗೆ ವರದಿಯಾಗಿಲ್ಲ. ಮುಂಜಾನೆ 5.44ರಲ್ಲಿ ಸಂಭವಿಸಿದ ಭೂಕಂಪದ ಕೇಂದ್ರ ಬಿಂದು ಬಂಡಿಪೋರಾದ ಸಿಂಬಲ್ ಪ್ರದೇಶದಲ್ಲಿತ್ತು ಎಂದು ಹವಾಮಾನ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಭೂಕಂಪದಿಂದ ಈ ಪ್ರದೇಶದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Facebook Comments

Sri Raghav

Admin