ನೋಟು ರದ್ದತಿ ಅನಗತ್ಯ ಕಸರತ್ತು ಡಾ.ಮನಮೋಹನ್ ಸಿಂಗ್‍ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

manamohan-shing
ಮೊಹಾಲಿ, ಸೆ.23- ದೇಶದ ಆರ್ಥಿಕ ಪ್ರಗತಿ ಕುಂಠಿತಕ್ಕೆಕಳೆದ ವರ್ಷದೀಟು ರದ್ಧತಿ ದುಸ್ಸಾಹಸವೇ ಕಾರಣ ಎಂದು ಪ್ರಧಾನಿ ಮನಮೋಹನ್ ಸಿಂಗ್ ಟೀಕಿಸಿದ್ದಾರೆ.  ಮೊಹಾಲಿಯಲ್ಲಿ ನಡೆದ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಲೀಡರ್‍ಶಿಪ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಕೆಲವು ಲ್ಯಾಟಿನ್‍ ಅಮೆರಿಕ ದೇಶಗಳನ್ನು ಹೊರತುಪಡಿಸಿ, ನಾಗರಿಕತೆಯ ಯಾವ ದೇಶದಲ್ಲೂ ನೋಟು ಅಮಾನ್ಯೀಕರಣ ಯಶಸ್ವಿಯಾಗಿಲ್ಲ ಎಂದು ಪ್ರತಿಪಾದಿಸಿದರು.


ನೋಟು ರದ್ಧತಿಯ ಅಗತ್ಯವಿತ್ತು ಎಂದು ನನಗೆ ಯಾವ ಸಂದರ್ಭದಲ್ಲೂ ಅನಿಸುವುದಿಲ್ಲ. ಆರ್ಥಿಕತೆಯಲ್ಲಿ ಚಲಾವಣೆಯಲ್ಲಿದ್ದ ಶೇ.86ರಷ್ಟು ನೋಟುಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯಲ್ಲೂ ಸಾಕಷ್ಟು ಲೋಪದೋಷಗಳು ಇದ್ದುದನ್ನು ನಾವೆಲ್ಲ ಕಂಡಿದ್ದೇವೆ ಎಂದು ಸಿಂಗ್ ಹೇಳಿದರು.

Facebook Comments

Sri Raghav

Admin