ನ್ಯಾಯಾಂಗ ವಿರುದ್ಧವೇ ಕಾನೂನು ಸಚಿವರ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

Ravishankar-Prasad---01

ನವದೆಹಲಿ, ಸೆ.23-ಅಧಿಕಾರ ನಡೆಸಲು ನಮಗೆ ಮುಕ್ತವಾಗಿ ಬಿಟ್ಟುಬಿಡಿ ಎಂದು ಹೇಳುವ ಮೂಲಕ ಕೇಂದ್ರ ಕಾನೂನು ಸಚಿವ ರವಿಶಂಕರ್‍ಪ್ರಸಾದ್ ನ್ಯಾಯಾಂಗವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜಧಾನಿಯಲ್ಲಿ ಆಯೋಜಿಸಿದ್ದ ಸಭೆಯೊಂದರಲ್ಲಿ ಮಾತನಾಡಿದ ಅವರು, ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳಿಗೆ ಆಡಳಿತ ನಡೆಸುವ ವಿಚಾರದಲ್ಲಿ ನ್ಯಾಯಾಂಗವು ವಿನಾಕಾರಣ ಹಸ್ತಕ್ಷೇಪ ಮಾಡಬಾರದು, ಚುನಾಯಿತ ಪ್ರತಿನಿಧಿಗಳು ತಮ್ಮ ಕರ್ತವ್ಯ ನಿಭಾಯಿಸಲು ಮುಕ್ತ ಅವಕಾಶ ನೀಡಬೇಕು ಎಂದು ಹೇಳಿದರು.

ನ್ಯಾಯಾಂಗ ವ್ಯವಸ್ಥೆಯು ಒಂದು ಕಾನೂನನ್ನು ರದ್ದುಗೊಳಿಸಬಹುದು ಅಥವಾ ಒಂದು ನೀತಿಯನ್ನು ಕಾನೂನು ಬಾಹಿರ ಎಂದು ತೀರ್ಪು ನೀಡಬಹುದು. ಆದರೆ ಸಮರ್ಪಕ ಆಡಳಿತ ನಿರ್ವಹಿಸಲು ಮತ್ತು ನೀತಿ, ನಿಯಮಗಳನ್ನು ರೂಪಿಸಲು ಚುನಾಯಿತ ಪ್ರತಿನಿಧಿಗಳಿಗೆ ಅವಕಾಶವಿದೆ. ಇದನ್ನು ನ್ಯಾಯಾಂಗ ಮನಗಾಣಬೇಕು ಎಂದು ಸಚಿವರು ಹೇಳಿದರು.

Facebook Comments

Sri Raghav

Admin