ಪದಚ್ಯುತ ಪಾಕ್ ಪಿಎಂ ನವಾಜ್ ಷರೀಫ್ ರ ಬ್ಯಾಂಕ್ ಖಾತೆ, ಆಸ್ತಿ ಮುಟ್ಟುಗೋಲು

ಈ ಸುದ್ದಿಯನ್ನು ಶೇರ್ ಮಾಡಿ

Nawaz-Shareef--1

ಇಸ್ಲಾಮಾಬಾದ್, ಸೆ.23-ಭಾರೀ ಭ್ರಷ್ಟಾಚಾರ ಮತ್ತು ಕಾಳಧನ ಪರಿವರ್ತನೆ ಆರೋಪಗಳನ್ನು ಎದುರಿಸುತ್ತಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಮಂತ್ರಿ ನವಾಜ್ ಷರೀಫ್ ಮತ್ತು ಅವರ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳು ಹಾಗೂ ಆಸ್ತಿಪಾಸ್ತಿಗಳನ್ನು ದೇಶದ ಅತ್ಯುನ್ನತ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿದೆ. ಇದರಿಂದ ಷರೀಫ್‍ಗೆ ಆರ್ಥಿಕ ಹೊಡೆತ ಬಿದ್ದಂತಾಗಿದೆ.  ರೈವಿಂಡ್‍ನಲ್ಲಿರುವ ಷರೀಫ್ ನಿವಾಸದ ಬಾಗಿಲಿಗೆ ಖಾತೆಗಳ ಸ್ತಂಭನ ಮತ್ತು ಆಸ್ತಿ-ಪಾಸ್ತಿ ಮುಟ್ಟುಗೋಲಿಗೆ ಸಂಬಂಧಪಟ್ಟ ನೋಟಿಸ್‍ಗಳನ್ನು ಅಂಟಿಸಲಾಗಿದೆ.

ಷರೀಫ್ ಮತ್ತವರ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಹಾಗೂ ಅವರ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ(ಎನ್‍ಎಬಿ) ತಿಳಿಸಿದೆ.  ಭ್ರಷ್ಟಾಚಾರ ಮತ್ತು ಹಣಕಾಸು ಅವ್ಯವಹಾರಗಳ ಗಂಭೀರ ಆರೋಪಗಳಿಗೆ ಗುರಿಯಾಗಿರುವ ಶರೀಫ್, ಅವರ ಪುತ್ರಿ ಮಾರ್ಯಾಮ್ ಮತ್ತು ಅಳಿಯ ಕ್ಯಾಪ್ಟನ್(ನಿವೃತ್ತ) ಸಫ್ದರ್ ಅವರು ಸೆ.26ರಂದು ಅಕೌಂಟೆಬಿಲಿಟಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

Facebook Comments

Sri Raghav

Admin