ಪಾರಂಪರಿಕ ನಡಿಗೆಗೆ ಯುವ ದಂಡು

ಈ ಸುದ್ದಿಯನ್ನು ಶೇರ್ ಮಾಡಿ

mysore

ಮೈಸೂರು, ಸೆ.23- ಕೇವಲ ಪಾರಂಪರಿಕ ಸ್ಥಳಗಳನ್ನು ವೀಕ್ಷಣೆ ಮಾಡುವುದು ಅಷ್ಟೇ ಅಲ್ಲದೆ ಅದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವ ವಿಶೇಷ ಕಾರ್ಯಕ್ರಮ ಪಾರಂಪರಿಕ ನಡಿಗೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ ತಿಳಿಸಿದರು. ದಸರಾ ಅಂಗವಾಗಿ ನಗರದ ರಂಗಚಾರ್ಲು ಪುರಭವನದ ಬಳಿ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಪಾರಂಪರಿಕ ಕಟ್ಟಡ ವಾಸ್ತು ಶಿಲ್ಪವನ್ನು ತಿಳಿದುಕೊಳ್ಳಬೇಕು ಎಂದರು.
ರಂಗಚಾರ್ಲು ಪುರಭವನದಿಂದ ಆರಂಭಗೊಂಡು ಸಿಲ್ವರ್ ಜೂಬ್ಲಿ ಕ್ಲಾಕ್ ಹವರ್, ಫ್ರೀ ಮೆನ್ಸನ್ ಕ್ಲಬ್ ರಾಜೇಂದ್ರ ವೃತ್ತ, ಮೈಸೂರು ಅರಮನೆ, ಕೃಷ್ಣರಾಜ ವೃತ್ತ, ದೇವರಾಜ ಮಾರುಕಟ್ಟೆ, ಕೃಷ್ಣರಾಜೇಂದ್ರ ಆಸ್ಪತ್ರೆ, ಟೆರಿಶಿಯನ್ ಕಾಲೇಜು, ಸಿದ್ದಾರ್ಥನಗರ ಪ್ರಥಮ ದರ್ಜೆ ಕಾಲೇಜು, ಮೈಸೂರು ಮೆಡಿಕಲ್ ಕಾಲೇಜು, ಆಯುರ್ವೇದ ಆಸ್ಪತ್ರೆಯ ಕಟ್ಟಡಗಳ ಬಗ್ಗೆ ಮಾಹಿತಿಯನ್ನು ಶಾಲಾಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞರಾದ ರಂಗರಾಜು, ಇಚನೂರು ಕುಮಾರ್ ಅವರು ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದರು.

Facebook Comments

Sri Raghav

Admin