ಬೇಲ್ ಮೇಲೆ ಹೊರಗಿರುವ ಬಿಎಸ್ವೈ ಭ್ರಷ್ಟಚಾರದ ವಿರುದ್ಧ ಮಾತನಾಡುತ್ತಾರೆ : ಉಗ್ರಪ್ಪ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa

ಅರಸೀಕೆರೆ, ಸೆ.23- ಈ ರಾಜ್ಯಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದು ವಿಧಾನ ಪರಿಷತ್ ಅಧ್ಯಕ್ಷ ಉಗ್ರಪ್ಪ ಜರಿದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ನಗರಕ್ಕೆ ಆಗಮಿಸಿದ ಉಗ್ರಪ್ಪ ಹಾಗೂ ಸಹಕಾರ ಸಚಿವ ರಮೇಶ್ ಜಾರ್ಕಿವಳಿ ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಚಾರದಲ್ಲಿ ಸಿಲುಕಿ ಜೈಲುವಾಸ ಅನುಭವಿಸಿದ್ದಲ್ಲದೇ, ಬೇಲ್ ಮೇಲೆ ಹೊರಬಂದಿರುವ ಯಡಿಯೂರಪ್ಪನವರು ಭ್ರಷ್ಟಚಾರದ ವಿರುದ್ಧ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಬಿಜೆಪಿ ನಾಯಕರ ಫೋನ್ ಕದ್ದಾಳಿಕೆ ಮಾಡಲಾಗುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಆದರೆ ಟೆಲಿಫೋನ್ ಇಲಾಖೆ ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸುಪ್ರೀಂಕೋರ್ಟ್‍ನ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ಕ್ರಮ ಕೈಗೊಳ್ಳುವ ಅವಕಾಶವಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು ಚಿಂತನೆ ನಡೆಸಲಿ ಎಂದು ಸಲಹೆ ನೀಡಿದರು. ರಾಜ್ಯ ಸರಕಾರದ ಜನಪರ ಆಡಳಿತ ಹಾಗೂ ಕೇಂದ್ರದ ಜನವಿರೋಧಿ ಆಡಳಿತವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತಯಾಚನೆ ಮಾಡಲಿದೆ ಎಂದು ಹೇಳಿದರು.

ಸಹಕಾರ ಹಾಗೂ ಸಣ್ಣ ಕೈಗಾರಿಕೆ ಇಲಾಖೆ ಸಚಿವ ರಮೇಶ್ ಜಾರ್ಕಿವಳಿ ಮಾತನಾಡಿ, ಸಹಕಾರ ಸಂಘಗಳಲ್ಲಿ ತಲಾ 50ಸಾವಿರದಂತೆ ರೈತರ ಸಾಲ ಮನ್ನಾ ಮಾಡಲಾಗಿದ್ದು, ಇದಕ್ಕೆ ರಾಜ್ಯ ಸರಕಾರ 8ಸಾವಿರ ಕೋಟಿಯನ್ನು ಬಿಡುಗಡೆ ಮಾಡಿದೆ. ಈಗಾಗಲೇ 1,400 ಕೋಟಿಯಷ್ಟು ಅನುದಾನ ರೈತ ಫಲಾನುಭವಿಗಳಿಗೆ ತಲುಪಿದೆ ಎಂದು ಹೇಳಿದರು. ಬೇನಾಮಿ ಕಂಪನಿಗಳ ಹೆಸರಿನಲ್ಲಿ ಅಕ್ರಮ ಆಸ್ತಿ ಮಾಡಲಾಗಿದೆ ಎಂಬ ಆರೋಪಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ್‍ಜಾರ್ಕಿವಳಿ ಆ ರೀತಿಯ ಅಕ್ರಮ ಆಸ್ತಿ ನಾನು ಮಾಡಿಲ್ಲ. ಅಲ್ಲದೇ ನನ್ನ ಹೆಸರಿನಲ್ಲಿದ್ದ ಎಲ್ಲ ಕಂಪನಿಗಳಿಗೆ ರಾಜೀನಾಮೆ ನೀಡಿದ್ದು ಇದಕ್ಕೆ ನಮ್ಮ ಚಾರ್ಟೇಡ್ ಅಕೌಂಟೆಟ್‍ಗಳು ಆದಾಯ ಇಲಾಖೆಗೆ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ಶ್ವೇತಾದೇವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಸದಸ್ಯರಾದ ಅಯ್ಯಪ್ಪ, ವೆಂಕಟೇಶ್, ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಬಸವರಾಜು, ನಗರಸಭೈ ಸದಸ್ಯ ಉಮಾಶಂಕರ್, ಕಾಂಗ್ರೆಸ್ ಮುಖಂಡರಾದ ಸಿದ್ದಪ್ಪ, ಜಗದೀಶ್ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin